ಗಂಗಾವತಿಯಲ್ಲಿ ‘ಸೈಕೋ’ ಕಾಮಿಯ ವಿಕೃತಿ: ಮಹಿಳೆಯರ ಒಳಉಡುಪುಗಳೇ ಈತನ ಟಾರ್ಗೆಟ್!

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ವಿಕೃತಕಾಮಿ ಸುತ್ತಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಂಗಾವತಿಯ ಸಿಬಿಎಸ್ ಬಡಾವಣೆಯಲ್ಲಿ ಮಹಿಳೆಯರ ಒಳಉಡುಪುಗಳನ್ನು ಕಳ್ಳತನವಾಗುತ್ತಿವೆ.ಮಹಿಳೆಯರಲ್ಲಿ ಆತಂಕ
ಸಾಮಾನ್ಯವಾಗಿ ತೊಳೆದ ಬಟ್ಟೆಗಳನ್ನು ಒಣಗಲು ಮನೆಯ ಮೇಲ್ಛಾವಣಿ ಅಥವಾ ಮುಂಭಾಗದಲ್ಲಿ ಹಾಕುತ್ತಾರೆ. ಈ ಬಟ್ಟೆಗಳಲ್ಲಿ ಮಹಿಳೆಯರ ಒಳಉಡುಪುಗಳು ಕಳ್ಳತನವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಮನೆಗಳಲ್ಲಿ ಒಂಟಿಯಾಗಿರುವ ಮಹಿಳೆಯರು ವೈರಲ್ ವಿಡಿಯೋ ನೋಡಿ ಆತಂಕಗೊಂಡಿದ್ದಾರೆ.ಸಿಸಿಟಿವಿ ಕ್ಯಾಮೆರಾದಲ್ಲಿ ಚಲನವಲನ ಸೆರೆ
ಮನೆಯೊಂದರ ಮುಂಭಾಗದಲ್ಲಿ ಅಳವಡಿಸಲಾಗಿರುವ ಕಳ್ಳನ ಚಲನವಲನ ಸಂಪೂರ್ಣವಾಗಿ ಸೆರೆಯಾಗಿದೆ. ರಾತ್ರಿ 12 ರಿಂದ 1 ಗಂಟೆ ಆಸುಪಾಸಿಗೆ ಎಂಟ್ರಿ ಕೊಡುವ ವಿಕೃತ ವ್ಯಕ್ತಿ ಸದ್ದಿಲ್ಲದೇ ಕಾಂಪೌಂಡ್ ಜಿಗಿದಿದ್ದಾನೆ. ನಂತರ ಒಳಗೆ ಹೋಗಿ ಒಳಉಡುಪು ಕದ್ದು ಎಸ್ಕೇಪ್ ಆಗಿದ್ದಾನೆ.ಯಾರು ಈ ವಿಕೃತಕಾಮಿ?
ಸದ್ಯ ಈ ವಿಡಿಯೋ ಸ್ಥಳೀಯಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಕೃತಕಾಮಿ ಮುಖಚಹರೆ ಸರಿಯಾಗಿ ಕಾಣಿಸಿಲ್ಲ. ಹಾಗಾಗಿ ಯಾರು ಈ ವ್ಯಕ್ತಿ? ಸ್ಥಳೀಯ ನಿವಾಸಿಯಾ ಅಥವಾ ಬೇರೆ ಪ್ರದೇಶದವನಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಬೆಂಗಳೂರಿನಲ್ಲಿಯೂ ಇಂಥದ್ದೇ ಘಟನೆ
ಈ ಹಿಂದೆ ಬೆಂಗಳೂರಿನ ರಾಜಗೋಪಾಲನಗರ ಮತ್ತು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹವುದೇ ಪ್ರಕರಣಗಳು ಬೆಳಕಿಗೆ ಬಂದಿದ್ದವು. ವಿಕೃತಕಾಮಿಗಳು ಲೇಡಿಸ್ ಪಿಜಿಗಳಿಗೆ ನುಗ್ಗಿ ಒಳಉಡುಪುಗಳನ್ನು ಕದಿಯುತ್ತಿದ್ದರು. ಅಪರಿಚಿತ ವ್ಯಕ್ತಿಯೋರ್ವ ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದು ಅಲ್ಲೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
