Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕದ ಎಫ್-18 ಯುದ್ಧವಿಮಾನ ಪತನ: ಇರಾನ್‌ನಿಂದ ಸಾಕ್ಷಿ ಬಿಡುಗಡೆ!

Spread the love

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕದ F-18 ಯುದ್ಧವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿದ್ದೇವೆ ಎಂದು ಇರಾನ್ ಬುಧವಾರ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನೂ ಬಿಡುಗಡೆ ಮಾಡಿದೆ.
ಇರಾನ್ ನ ಸರಕಾರಿ ಮಾಧ್ಯಮ ಸಂಸ್ಥೆಯಾದ ‘ಪ್ರೆಸ್ ಟಿವಿ’ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ‘X’ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ಒಂದು ಯುದ್ಧವಿಮಾನವನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಹೇಳಲಾಗಿದೆ. ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ F-18 ಯುದ್ಧವಿಮಾನವನ್ನು ಗುರಿಯಾಗಿಸಿಕೊಂಡಿದೆ ಎಂದು ಘೋಷಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.ಈ ಮಧ್ಯೆ ಅಮೆರಿಕ ಮುಂದಿರಿಸಿದ ‘ಕದನ ವಿರಾಮ’ದ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ. ತನ್ನ ಬೇಡಿಕೆಗಳು ಈಡೇರಿಸುವವರೆಗೆ ದಾಳಿಗಳು ಮುಂದುವರಿಯುತ್ತವೆ ಎಂದು ಎಚ್ಚರಿಕೆ ನೀಡಿದೆ. “ಕದನ ವಿರಾಮ ಯಾವಾಗ ಮತ್ತು ಯಾವ ಷರತ್ತುಗಳಲ್ಲಿ ಜಾರಿಗೊಳಿಸಬೇಕು ಎಂಬುದನ್ನು ಇರಾನ್ ತಾನೇ ನಿರ್ಧರಿಸುತ್ತದೆ” ಎಂದು ಇರಾನ್ ತಿಳಿಸಿದೆ. ಅಮೆರಿಕದ 15 ಅಂಶಗಳ ಪ್ರಸ್ತಾಪವನ್ನು ನಿರಾಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಯುದ್ಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಟ್ರಂಪ್ ತೆಗೆದುಕೊಳ್ಳುವ ಸಮಯದಲ್ಲಿ ಅಲ್ಲ; ಇರಾನ್ ತನ್ನದೇ ಆದ ನಿರ್ಧಾರದ ಮೇರೆಗೆ ಅದನ್ನು ಘೋಷಿಸುತ್ತದೆ,” ಎಂದು ಅವರು ಹೇಳಿದ್ದಾರೆ.ಯುದ್ಧ ನಿಲ್ಲಿಸಲು ಇರಾನ್ ಕೆಲವು ಷರತ್ತುಗಳನ್ನು ಮುಂದಿರಿಸಿದೆ. ದಾಳಿಗಳನ್ನು ನಿಲ್ಲಿಸುವುದು, ಯುದ್ಧ ಹಾನಿಗೆ ಪರಿಹಾರ ನೀಡುವುದು ಮತ್ತು ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ಹಕ್ಕನ್ನು ಮಾನ್ಯಗೊಳಿಸುವುದು ಅವುಗಳಲ್ಲಿ ಪ್ರಮುಖವಾಗಿವೆ ಎಂದು ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *