ಅಮೆರಿಕ-ಇಸ್ರೇಲ್ ದಾಳಿಯಿಂದ ಇರಾನ್ನ 56 ಸಾಂಸ್ಕೃತಿಕ ತಾಣಗಳಿಗೆ ಹಾನಿ

ಟೆಹ್ರಾನ್: ಯುದ್ಧ ಆರಂಭವಾದ ನಂತರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್ ನ ವಸ್ತು ಸಂಗ್ರಹಾಲಯಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಕನಿಷ್ಠ 56 ಸಾಂಸ್ಕೃತಿಕ ತಾಣಗಳಿಗೆ ಗಂಭೀರ ಹಾನಿಯಾಗಿವೆ ಎಂದು ಇರಾನ್ ದೇಶದ ಸಂಸ್ಕೃತಿ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ISNA ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಹಾನಿಗೊಳಗಾದ 19 ಸ್ಮಾರಕಗಳೊಂದಿಗೆ ಟೆಹ್ರಾನ್ ಪ್ರಾಂತ್ಯವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಚಿವಾಲಯ ಹೇಳಿದೆ. ಇದರ ಜೊತೆಗೆ, ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಲ್ಲಿಯೂ 12 ಪ್ರಮುಖ ಸ್ಮಾರಕಗಳು ಹಾನಿಗೊಳಗಾಗಿವೆ ಎಂದು ವರದಿ ಉಲ್ಲೇಖಿಸಿದೆ.
ಯುದ್ಧದ ನಡುವೆ ಸಾಂಸ್ಕೃತಿಕ ಪಾರಂಪರಿಕ ತಾಣಗಳಿಗೆ ಉಂಟಾಗುತ್ತಿರುವ ಹಾನಿ ಕುರಿತು ಆತಂಕ ವ್ಯಕ್ತವಾಗಿದ್ದು, ಇತರೆ ಪ್ರಾಂತ್ಯಗಳಲ್ಲಿಯೂ ಹಲವು ತಾಣಗಳು ಹಾನಿಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
