Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುಎಇಯಲ್ಲಿ ವಿಡಿಯೋ ಶೇರ್ ಮಾಡಿದರೆ ಜೈಲು ಶಿಕ್ಷೆ: ಸಂಘರ್ಷದ ದೃಶ್ಯ ಹಂಚಿಕೊಂಡ 10 ಜನರ ಬಂಧನ

Spread the love

ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ನೈಜ ಹಾಗೂ AI ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ 10 ಮಂದಿಯನ್ನು ಬಂಧಿಸಿದೆ ಎಂದು Aljazeera ವರದಿ ಮಾಡಿದೆ.
ಯುಎಇಯ ಅಧಿಕೃತ ಸುದ್ದಿ ಸಂಸ್ಥೆ WAM ನೀಡಿರುವ ಮಾಹಿತಿಯಂತೆ, ಆರೋಪಿತರು ಹಂಚಿಕೊಂಡ ವೀಡಿಯೊಗಳಲ್ಲಿ ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿರುವುದು ಅಥವಾ ಪ್ರೊಜೆಸ್ಟೈಲ್ ಗಳಿಂದ ದಾಳಿಗೊಳಗಾದಂತೆ ತೋರಿಸುವ ದೃಶ್ಯಗಳು ಸೇರಿವೆ. ಇದಲ್ಲದೆ, ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಿದ ನಕಲಿ ಸ್ಫೋಟಗಳು, ಬೆಂಕಿ ಅವಘಡಗಳು ಹಾಗೂ ಪ್ರಮುಖ ಹೆಗ್ಗುರುತುಗಳ ಮೇಲೆ ದಾಳಿ ನಡೆದಂತೆ ತೋರಿಸುವ ದೃಶ್ಯಗಳೂ ಒಳಗೊಂಡಿವೆ.
ಇಂತಹ ನೈಜ ಅಥವಾ ಕೃತಕ ವೀಡಿಯೊಗಳನ್ನು ಹಂಚುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಸಾರ್ವಜನಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ, ಇವು ಸರ್ಕಾರದ ಮೇಲಿನ ವಿಶ್ವಾಸವನ್ನು ಕುಗ್ಗಿಸುವಂತಹ ವಿಷಯವನ್ನು ಹರಡುತ್ತವೆ ಎಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.
“ಉದ್ದೇಶಪೂರ್ವಕ ವಂಚನೆ, ಸಾರ್ವಜನಿಕ ಭದ್ರತೆಯ ಮೇಲೆ ದಾಳಿ, ಜನರಲ್ಲಿ ಭಯ ಹುಟ್ಟಿಸುವುದು ಹಾಗೂ ಸಾಮಾಜಿಕ ಶಾಂತಿಯನ್ನು ಭಂಗಪಡಿಸುವುದು” ಎಂಬ ಆರೋಪಗಳಡಿ ಬಂಧಿತರಾದವರಿಗೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಜೊತೆಗೆ 1,00,000 ದಿರ್ಹಮ್ ದಂಡ (ಸುಮಾರು 24 ಲಕ್ಷ ರೂಪಾಯಿ ) ವಿಧಿಸಬಹುದು ಎಂದು WAM ವರದಿ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *