ಬಹ್ರೇನ್ನಲ್ಲಿ ಭಾರತೀಯನ ಬಂಧನ ಕೇವಲ ವದಂತಿ: ಗೂಢಚರ್ಯೆ ಆರೋಪವನ್ನು ನಿರಾಕರಿಸಿದ ಅಧಿಕಾರಿಗಳು

ಮನಾಮಾ: ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಿತಿನ್ ಮೋಹನ್ ಎಂಬ ಭಾರತೀಯ ಪ್ರಜೆಯನ್ನು ಬಕ್ರೇನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಹೇಳಿಕೆಯೊಂದಿಗೆ ಕಪ್ಪು ಟಿ-ಶರ್ಟ್ ಧರಿಸಿದ ಗಡ್ಡಧಾರಿ ವ್ಯಕ್ತಿಯೊಬ್ಬರನ್ನು ಬದ್ರೇನ್ ಆಂತರಿಕ ಸಚಿವಾಲಯದ ಚಿಹ್ನೆಯಿರುವ ಹಿನ್ನೆಲೆಯ ಮುಂದೆ ಕೈಕೋಳ ಹಾಕಿರುವ ಚಿತ್ರವನ್ನೂ ಹಂಚಿಕೊಳ್ಳಲಾಗಿದೆ. ಆದರೆ ಈ ಹೇಳಿಕೆ ಆಧಾರರಹಿತವಾಗಿದ್ದು, ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.

ಪಾಕಿಸ್ತಾನ ಮೂಲದ ಎಕ್ಸ್ ಖಾತೆಯಾದ ದಿ ಇಂಟೆಲ್ ಕಸ್ಪೋರ್ಟಿಯಂ ಮೊಸಾದ್ ಗೆ ‘ಸೂಕ್ಷ್ಮ ಜಿಯೋಸ್ಪೇಷಿಯಲ್ ಡೇಟಾ, ಫೊಟೋಗಳು ಹಾಗೂ ಆಯಕಟ್ಟಿನ ಸ್ಥಳಗಳ ವೀಡಿಯೊ’ ರವಾನಿಸಿದ್ದಕ್ಕಾಗಿ ಭಾರತೀಯ ಇಂಜಿನಿಯರ್ ನಿತಿನ್ ಮೋಹನ್ ಅವರನ್ನು ಬಹೇನ್ ನ ಗುಪ್ತಚರ ಇಲಾಖೆ ಬಂಧಿಸಿದೆ ಎಂದು ಹೇಳಿಕೊಂಡಿದೆ. ಇದೇ ರೀತಿಯ ಹೇಳಿಕೆಯನ್ನು ಅರ್ಟಬನ್ 1727 AD @3lm_al) ಎಂಬ ಮತ್ತೊಂದು ಎಕ್ಸ್ ಖಾತೆಯೂ ಅದೇ ಚಿತ್ರದೊಂದಿಗೆ ಹಂಚಿಕೊಂಡಿದೆ.
ಇದಲ್ಲದೆ, ಪಾಕಿಸ್ತಾನ ಮೂಲದ ಮತ್ತೊಂದು ಎಕ್ಸ್ ಖಾತೆಯಾದ ಎಕ್ಸ್ಪೋಸ್ ಪ್ರೊಪಗಾಂಡಾ (@EPropoganda1) ಕೂಡ ಮಾರ್ಚ್ 10, 2026 ರಂದು ಇದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಪಾಕಿಸ್ತಾನದ ಪತ್ರಿಕೆ ಮಿನಿಟ್ ಮಿರರ್ ಸಹ ತನ್ನ ವೆಬ್ ಪೋರ್ಟಲ್ ನಲ್ಲಿ ‘ಇಸ್ರೇಲಿನ ಮೊಸಾದ್ ಗಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬದ್ರೇನ್ ಭಾರತೀಯ ಪ್ರಜೆಯನ್ನು ಬಂಧಿಸಿದೆ’ ಎಂಬ ಶೀರ್ಷಿಕೆಯಡಿ ಇದೇ ಚಿತ್ರ ಬಳಸಿ ವರದಿ ಪ್ರಕಟಿಸಿತ್ತು.
ಆದರೆ ಈ ಹೇಳಿಕೆಗಳ ಪರಿಶೀಲನೆಯಿಂದ ಅವು ಸತ್ಯಕ್ಕೆ ದೂರವಾದವು ಎಂಬುದು ಸ್ಪಷ್ಟವಾಗಿದೆ.
-ಫ್ಯಾಕ್ಟ್ ಚೆಕ್
ಬಕ್ರೇನ್ ನ ಆಂತರಿಕ ಸಚಿವಾಲಯವು 2026ರ ಮಾರ್ಚ್ 9ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಮತ್ತು ಆರ್ಥಿಕ ಹಾಗೂ ಎಲೆಕ್ಟ್ರಾನಿಕ್ ಭದ್ರತೆಗಾಗಿ ಕಾರ್ಯನಿರ್ವಹಿಸುವ ಜನರಲ್ ಡೈರೆಕ್ಟರೇಟ್ ನ ಸೈಬರ್ ಅಪರಾಧ ವಿಭಾಗವು ಆರು ಏಷ್ಯನ್ ಪ್ರಜೆಗಳನ್ನು ಬಂಧಿಸಿದೆ.
ಬಂಧಿತರನ್ನು ಪಾಕಿಸ್ತಾನದ ಮೊಹಮ್ಮದ್ ಮುವಾರ್ ಅಕ್ಟರ್, ಅಫೈಲ್ ಖಾನ್, ಅಹ್ಮದ್ ಮುಲ್ತಾಜ್, ಅರ್ಸ್ಲಾನ್ ಅಲಿ ಸಾಜಿದ್ ಮತ್ತು ಅಬ್ದುಲ್ ರೆಹಮಾನ್ ಅಬ್ದುಲ್ ಸತ್ತಾರ್ ಹಾಗೂ ಬಾಂಗ್ಲಾದೇಶದ ಮುಹಮ್ಮದ್ ಇಸ್ರಾಫಿಲ್ ಮಿರ್ ಎಂದು ಗುರುತಿಸಲಾಗಿದೆ.
ಇವರ ಮೇಲೆ ಇರಾನ್ ದಾಳಿಯ ಪರಿಣಾಮಗಳಿಗೆ ಸಂಬಂಧಿಸಿದ ‘ವೀಡಿಯೊ ತುಣುಕುಗಳನ್ನು ಚಿತ್ರೀಕರಿಸುವುದು, ಪ್ರಕಟಿಸುವುದು ಮತ್ತು ಮರುಪ್ರಕಟಿಸುವುದು’ ಎಂಬ ಆರೋಪವಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ದ್ವೇಷಭಾವನೆಗಳನ್ನು ಪ್ರೇರೇಪಿಸುವ ಹಾಗೂ ನಾಗರಿಕರು ಮತ್ತು ನಿವಾಸಿಗಳಲ್ಲಿ ತಪ್ಪು ಮಾಹಿತಿ ಮತ್ತು ಭಯವನ್ನು ಹರಡುವ ವೀಡಿಯೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸಚಿವಾಲಯದ ಪ್ರಕಟಣೆಯಲ್ಲಿ ಯಾವುದೇ ಭಾರತೀಯ ಪ್ರಜೆಯನ್ನು ಉಲ್ಲೇಖಿಸಲಾಗಿಲ್ಲ. ಅಲ್ಲದೆ, ಮೊಸಾದ್ ಗೆ ಸಂಬಂಧಿಸಿದ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ವೈರಲ್ ಆಗಿರುವ ಚಿತ್ರದಲ್ಲಿರುವ ವ್ಯಕ್ತಿಯೂ ಬಂಧಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ವೈರಲ್ ಚಿತ್ರದ ಮೇಲೆ ನಡೆಸಿದ ರಿವರ್ಸ್ ಇಮೇಜ್ ಹುಡುಕಾಟದಲ್ಲಿಯೂ ಹಿಂದಿನ ಯಾವುದೇ ಹೊಂದಾಣಿಕೆಗಳು ಕಂಡುಬಂದಿಲ್ಲ. ಇದರಿಂದಾಗಿ ಆ ಚಿತ್ರವು ಕೃತಕವಾಗಿ ಸೃಷ್ಟಿಸಲ್ಪಟ್ಟಿರುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ, ಮೊಸಾದ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಿತಿನ್ ಮೋಹನ್ ಎಂಬ ಭಾರತೀಯ ಪ್ರಜೆಯನ್ನು ಬದ್ರೇನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಹೇಳಿಕೆ ಸುಳ್ಳು ಬಕ್ರೇನ್ ನಲ್ಲಿ ಸೈಬರ್ ಅಪರಾಧ ಉಲ್ಲಂಘನೆ ಆರೋಪದ ಮೇಲೆ ಬಂಧಿತರಾದವರು ಐದು ಪಾಕಿಸ್ತಾನಿಗಳು ಮತ್ತು ಒಬ್ಬ ಬಾಂಗ್ಲಾದೇಶಿ ಸೇರಿದ್ದಾರೆ.