Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫಕ್ರುದ್ದೀನ್ ಅಲಿ ಅಹಮದ್ ವೈದ್ಯಕೀಯ ಕಾಲೇಜಿನ ಹೆಸರು ಬದಲಾವಣೆ; ಸರ್ಕಾರದಿಂದ ಅಧಿಕೃತ ಆದೇಶ

Spread the love

ಗುವಾಹತಿ: ಅಸ್ಸಾಂನ ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಬರ್ಪೇಟಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.
ಮಾಜಿ ರಾಷ್ಟ್ರಪತಿಗಳ ಗೌರವಾರ್ಥ ಬರ್ಪೇಟಾದಲ್ಲಿದ್ದ ಕಾಲೇಜಿಗೆ ಅವರ ಹೆಸರನ್ನು ಇಡಲಾಗಿತ್ತು. ಆದರೆ ರಾಜ್ಯದ ಇಂಥ ಸಂಸ್ಥೆಗಳಿಗೆ ಈ ಹೆಸರು ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಹೆಸರನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

“ರಾಜ್ಯ ಸರ್ಕಾರ ಆರಂಭಿಸಿದ ಎಲ್ಲ 15 ವೈದ್ಯಕೀಯ ವಿಜ್ಞಾನ ಕಾಲೇಜುಗಳಿಗೆ ಆಯಾ ಕಾಲೇಜುಗಳು ಇರುವ ಸ್ಥಳದ ಹೆಸರನ್ನು ಇಡಲಾಗಿದೆ. ಆದರೆ ಬರ್ಪೇಟಾ ಕಾಲೇಜಿಗೆ ಮಾತ್ರ ಫಕ್ರುದ್ದೀನ್ ಅಲಿ ಅಹ್ಮದ್ ಹೆಸರು ಇದೆ. ಇದು ಇತರ ಹೆಸರುಗಳಿಗಿಂತ ಭಿನ್ನವಾಗಿದ್ದು, ಇದು ಖಾಸಗಿ ಕಾಲೇಜೇ ಎಂಬ ಸಂದೇಹದ ಹಲವು ಪ್ರಶ್ನೆಗಳು ಕೇಳಿ ಬರುತ್ತಿದ್ದವು” ಎಂದು ಶರ್ಮಾ ಸ್ಪಷ್ಟಪಡಿಸಿದರು.
ಆದ್ದರಿಂದ ಸಂಸ್ಥೆಗೆ ಬರ್ಪೇಟಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಆದಾಗ್ಯೂ ಫಕ್ರುದ್ದೀನ್ ಅಲಿ ಅಹ್ಮದ್‌ ಅವರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ರಾಜ್ಯದ ಏಕೈಕ ನಾಯಕರಾಗಿರುವ ಹಿನ್ನೆಲೆಯಲ್ಲಿ, ಇನ್ನೊಂದು ಶೈಕ್ಷಣಿಕ ಅಥವಾ ಸಾಂಸ್ಕೃತಿಕ ಸಂಸ್ಥೆಗೆ ಅವರ ಹೆಸರನ್ನು ಇಡಲಾಗುವುದು. ಈ ಸಂಬಂಧ ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಬರ್ಪೇಟಾದಲ್ಲಿ 2011ರಲ್ಲಿ ಆರಂಭವಾದ ಎಫ್‌ಎಎಎಂಸಿಎಚ್ (ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ) ರಾಜ್ಯದ ಐದನೇ ವೈದ್ಯಕೀಯ ವಿಜ್ಞಾನ ಕಾಲೇಜು ಆಗಿದ್ದು, ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಗಳನ್ನು ನೀಡುತ್ತಿದೆ. 500 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಂದಿದ್ದು, ಎಂಬಿಬಿಎಸ್ ಕೋರ್ಸ್ ಗೆ 125 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಫಕ್ರುದ್ದೀನ್ ಅಲಿ ಅಹ್ಮದ್ ಅವರು ಭಾರತದ ಐದನೇ ರಾಷ್ಟ್ರಪತಿಗಳಾಗಿದ್ದು, 1974ರಿಂದ 77ರ ವರೆಗೆ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದರು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಸಲಹೆಯಂತೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *