Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನ ಆಳದಲ್ಲೂ ಕಾಮುಕನ ಅಟ್ಟಹಾಸ!: ಸ್ಕೂಬಾ ಡೈವಿಂಗ್ ವೇಳೆ ಒಬ್ಬಂಟಿ ಯುವತಿಗೆ ತರಬೇತುದಾರನಿಂದಲೇ ಕಿರುಕು*ಳ

Spread the love

ಈಜಿಪ್ಟ್ : ಒಬ್ಬಂಟಿ ಯುವತಿಗೆ ಸ್ಕೂಬಾ ಡೈವಿಂಗ್ ವೇಳೆ ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ನೀರಿನೊಳಗೆ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ತರಬೇತು ದಾರು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಎಲ್ಲೆಂದರಲ್ಲಿ ಮುಟ್ಟಿದ್ದಾನೆ. ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಪ್ರವಾಸಿ ಯುವತಿ ಪ್ರಯತ್ನಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಯುವತಿಯೇ ಈ ವಿಡಿಯೋ ಬಹಿರಂಗಪಡಿಸಿ ಕಿರುಕುಳ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಘಟನೆ ಈಜಿಪ್ಟ್‌ನಲ್ಲಿ ನಡೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಕೂಬಾ ಡೈವಿಂಗ್ ಕಲಿಯುತ್ತಿದ್ದ ಒಬ್ಬಂಟಿ ಯುವತಿಯನ್ನು ಟಾರ್ಗೆಟ್ ಮಾಡಿದ ಸ್ಕೂಬಾ ಡೈವರ್, ನೀರಿನೊಳಗೆ ಆಕೆ ಅಸಹಾಯಕರಾಗಿರುವಾಗಲೇ ಕಿರುಕುಳ ನೀಡುವ ಪ್ರಯತ್ನ ಮಾಡಲಾಗಿದೆ. ರಶಾ ಮೆಡಿಯನ್ ಎಂಬ ಯುವತಿ ತನಗಾದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾಳೆ. ರಶಾ ಪ್ರಕಾರ, ಓಪನ್ ವಾಟರ್ ಸ್ಕೂಬಾ ಡೈವಿಂಗ್ ಕೋರ್ಸ್ ಕಲಿಯುವಾಗ ಈ ಘಟನೆ ನಡೆದಿದೆ. ತರಬೇತಿಯ ವೇಳೆ, ಸುರಕ್ಷತೆ ಅಥವಾ ಪಾಠಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ತರಬೇತುದಾರ ತನ್ನನ್ನು ಮುಟ್ಟಿದ್ದಾನೆ. ಇದರಿಂದ ತನಗೆ ಮುಜುಗರವಾಯಿತು ಎಂದು ಅವರು ಹೇಳಿದ್ದಾರೆ.
ನೀರೊಳಗೇ ತರಬೇತುದಾರನ ಕೈ ತಳ್ಳಿದ ಯುವತಿ
ವೈರಲ್ ಆಗಿರುವ ವಿಡಿಯೋದಲ್ಲಿ, ರಶಾ ನೀರೊಳಗೆ ತರಬೇತುದಾರನ ಜೊತೆ ಡೈವಿಂಗ್ ಅಭ್ಯಾಸ ಮಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ, ತರಬೇತುದಾರ ಆಕೆಗೆ ಗೈಡ್ ಮಾಡುವ ನೆಪದಲ್ಲಿ ಹಲವು ಬಾರಿ ಆಕೆಯ ದೇಹವನ್ನು ಮುಟ್ಟಿದ್ದಾನೆ. ತನ್ನ ಪೋಸ್ಟ್‌ನಲ್ಲಿ ರಶಾ, ತರಬೇತುದಾರನ ವರ್ತನೆಯನ್ನು ತಡೆಯಲು ಆತನ ಕೈಗಳನ್ನು ತಳ್ಳಿಹಾಕಿದೆ ಎಂದು ವಿವರಿಸಿದ್ದಾರೆ. ವಿಡಿಯೋದಲ್ಲಿ ತಾನು ಆತನ ಕೈಯನ್ನು ಪಕ್ಕಕ್ಕೆ ಸರಿಸಿ, ಮತ್ತೆ ಮುಟ್ಟದಂತೆ ಬೇರೆ ಕಡೆ ಇಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಬರೆದಿದ್ದಾರೆ.ನೀರೊಳಗಿನ ಇಂತಹ ಸಂದರ್ಭಗಳಲ್ಲಿ ಅಧಿಕಾರದ ಅಸಮತೋಲನವಿರುತ್ತದೆ ಎಂದು ರಶಾ ಹೇಳಿದ್ದಾರೆ. ತರಬೇತುದಾರರು ಡೈವ್ ಅನ್ನು ನಿಯಂತ್ರಿಸುವುದರಿಂದ, ವಿದ್ಯಾರ್ಥಿಗಳು ಅಹಿತಕರವೆನಿಸಿದರೂ ಸುಮ್ಮನಿರುವ ಒತ್ತಡಕ್ಕೆ ಒಳಗಾಗುತ್ತಾರೆ.ವೈಯಕ್ತಿಕ ಗಡಿಗಳನ್ನು ದಾಟುವ ಇಂತಹ ವರ್ತನೆಯನ್ನು ಯಾರೂ ಸಹಿಸಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.
ಮೊದಲಿನಿಂದಲೂ ಅನುಮಾನಾಸ್ಪದವಾಗಿ ವರ್ತಿಸಿದ್ದ ತರಬೇತುದಾರ
ನಂತರ ಮತ್ತೊಂದು ವಿಡಿಯೋ ಹಂಚಿಕೊಂಡ ರಶಾ, ತರಬೇತುದಾರ ಪಾಠದ ಆರಂಭದಿಂದಲೇ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಎಂದು ಹೇಳಿದ್ದಾರೆ. ಒಬ್ಬಂಟಿಯಾಗಿ ಪ್ರಯಾಣಿಸುವಾಗ ಸ್ಕೂಬಾ ಡೈವಿಂಗ್ ಕಲಿಯುವ ಮಹಿಳೆಯರು, ಡೈವಿಂಗ್ ಶಾಲೆ ಅಥವಾ ತರಬೇತುದಾರರನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ತಮ್ಮ ಸಂದೇಶದಲ್ಲಿ, ಅವರು ಈ ಘಟನೆಗೆ ಕಾರಣನಾದ ತರಬೇತುದಾರನ ಹೆಸರನ್ನು ಸಹ ಉಲ್ಲೇಖಿಸಿದ್ದು, ಆತನನ್ನು ಯಾರೂ ನೇಮಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *