Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜೀನಾಮೆ ನನ್ನ ಪ್ರಜ್ಞಾಪೂರ್ವಕ ನಿರ್ಧಾರ: ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಆನಂದ ಬೋಸ್ ಸ್ಪಷ್ಟನೆ

Spread the love

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತಮ್ಮ ರಾಜೀನಾಮೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆಯು “ಪ್ರಜ್ಞಾಪೂರ್ವಕ” ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ‘ಸೂಕ್ತ ಸಮಯ ಬರುವವರೆಗೂ ರಾಜೀನಾಮೆ ಹಿಂದಿನ ಕಾರಣಗಳು ಗೌಪ್ಯವಾಗಿರಲಿವೆ’ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಲು ಕಾರಣವೇನೆಂದು ಕೇಳಿದಾಗ, ಬೋಸ್ ಕ್ರಿಕೆಟ್ ಅನ್ನು ಉಲ್ಲೇಖಿಸುವ ಮೂಲಕ ತಮ್ಮ ನಿರ್ಧಾರವನ್ನು ವಿವರಿಸಿದರು. ಅಧಿಕಾರಾವಧಿಯನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ನಂಬಿರುವುದಾಗಿ ಹೇಳಿದರು.

“ಎಲ್ಲಿ ಪ್ರವೇಶವಿದೆಯೋ ಅಲ್ಲಿ ನಿರ್ಗಮನವೂ ಇರುತ್ತದೆ. ನಾನು ಇಲ್ಲಿ ಗವರ್ನರ್ ಆಗಿ 1,200 ದಿನಗಳನ್ನು ಪೂರ್ಣಗೊಳಿಸಿದ್ದೇನೆ. ಅಂದರೆ ಕ್ರಿಕೆಟ್ ಪರಿಭಾಷೆಯಲ್ಲಿ 12 ಶತಕಗಳು. ಅದು ಸಾಕು. ಯಾವಾಗ ನಿಲ್ಲಬೇಕು ಎಂಬುದಕ್ಕೂ ಒಂದು ಸಮಯ ಇರುತ್ತದೆ. ನಿರ್ಗಮನಕ್ಕೆ ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಸಿ.ವಿ. ಆನಂದ ಬೋಸ್ ಅವರು ಶನಿವಾರ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ತಮ್ಮರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆ‌ರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *