ಗುಂಡ್ಲುಪೇಟೆ: ಕಬ್ಬಿನ ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆ; ಸ್ಥಳೀಯರಲ್ಲಿ ಆತಂಕ

ಚಾಮರಾಜನಗರ : ರೈತರ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ ಬಾಳೆತೋಟದಲ್ಲಿ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಮೂರು ತಿಂಗಳ ಮರಿಗಳು ಎಂಬ ಅಂದಾಜು ಮಾಡಲಾಗಿದೆ.
ತಾಯಿ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿ, ಮರಿಗಳ ಸಮೇತ ಬೋನ್ ಇರಿಸಿ ತಾಯಿ ಚಿರತೆ ಸೆರೆಗೆ ಚಿಂತನೆ ನಡೆಸಲಾಗಿದೆ.
