ಸಪ್ತಪದಿ ತುಳಿದ ಟಾಲಿವುಡ್ ಸ್ಟಾರ್ ಜೋಡಿ :ಉದಯಪುರದಲ್ಲಿ ರಶ್ಮಿಕಾ-ವಿಜಯ್ ಕಲ್ಯಾಣ

ಹೈದರಾಬಾದ್: ಟಾಲಿವುಡ್ ಜೋಡಿ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ (Rashmika Mandanna) ವಿಜಯ್ ದೇವರಕೊಂಡ (Vijay Deverakonda) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುರುವಾರ (ಫೆ. 26) ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿದೆ
ವಿರೋಶ್ ವಿವಾಹದ ಸುಂದರ ಫೋಟೋಗಳನ್ನು ರಶ್ಮಿಕಾ – ದೇವರಕೊಂಡ ಅವರು ಹಂಚಿಕೊಂಡಿದ್ದಾರೆ.
Hai MY Loves.. My Husband.. ಎಂದು ರಶ್ಮಿಕಾ ಫೋಟೋಸ್ಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ಭಾರೀ ವೈರಲ್ ಆಗಿದೆ. 1 ಮಿಲಿಯನ್ ಅಧಿಕ ಲೈಕ್ ಹಾಗೂ ಸಾವಿರಾರು ಕಮೆಂಟ್ಸ್ಗಳು ಈ ಪೋಸ್ಟ್ಗೆ ಹರಿದು ಬಂದಿದೆ.

ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ವಿರೋಶ್ ವಿವಾಹ ನೆರವೇರಿದೆ. ಎರಡೂ ಕುಟುಂಬದ 100 ಮಂದಿ ಆಪ್ತರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ.
‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ಜೋಡಿ ಆ ಬಳಿಕ ಆತ್ಮೀಯವಾಗಿದ್ದರು. ಆದರೆ ತನ್ನ ಸಂಬಂಧವನ್ನು ಗೌಪ್ಯವಾಗಿಟ್ಟುಕೊಂಡಿದ್ದರು.
ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ, ಶಾಂತಿಯಿಂದ ಇರುವುದು ಹೇಗೆಂದು ನನಗೆ ತೋರಿಸಿದ ವ್ಯಕ್ತಿ! ದೊಡ್ಡ ಕನಸು ಕಾಣುವುದು ಸಂಪೂರ್ಣವಾಗಿ ಸರಿ ಎಂದು ನನಗೆ ಪ್ರತಿದಿನ ಹೇಳುತ್ತಿದ್ದ ವ್ಯಕ್ತಿ ಮತ್ತು ನಾನು ಎಂದಿಗೂ ಸಾಧಿಸಬಹುದೆಂದು ಭಾವಿಸುವುದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಿರಂತರವಾಗಿ ಹೇಳುತ್ತಿದ್ದ ವ್ಯಕ್ತಿ ಎಂದು ಗಂಡನ ಬಗ್ಗೆ ರಶ್ಮಿಕಾ ಅವರು ಬರೆದುಕೊಂಡಿದ್ದಾರೆ.
ವಿಜ್ಜೂ, ನಿನ್ನ ಮೇಲಿರುವ ಭಾವನೆಗಳನ್ನು ವರ್ಣಿಸಲು ನನಗೆ ಪದಗಳೇ ಸಾಲದು!! ನಾನು ಯಾವಾಗಲೂ ನಿನಗೆ ಅದನ್ನೇ ಹೇಳುತ್ತಿದ್ದೆ!! ಆದರೆ ನಿನಗೆ ಇದ್ದಕ್ಕಿದ್ದಂತೆ ನನ್ನ ಎಲ್ಲಾ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಸಂತೋಷ, ಜೀವನ – ಎಲ್ಲವೂ ಈಗ ಹೆಚ್ಚು ಅರ್ಥಪೂರ್ಣವಾಗಿದೆ – ಏಕೆಂದರೆ ನಾನು ನಿನ್ನನ್ನು ಹೊಂದಿದ್ದೇನೆ – ಅದೆಲ್ಲದಕ್ಕೂ ಸಾಕ್ಷಿಯಾಗಿದ್ದೇನೆ.. ಅದರ ದೊಡ್ಡ ಭಾಗವಾಗಿದ್ದೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ನಾನು ನಿಮ್ಮ ಹೆಂಡತಿಯಾಗಲು ತುಂಬಾ ತುಂಬಾ ಉತ್ಸುಕನಾಗಿದ್ದೇನೆ! ನಿಮ್ಮ ಹೆಂಡತಿಯಾಗಲು! ನಿಮ್ಮ ಹೆಂಡತಿ ಎಂದು ಕರೆಯಲ್ಪಡಲು!! ಈಗ ಫುಲ್ ಪಾರ್ಟಿ ಸಮಯ!!
ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಿನಿಮಾರಂಗದ ಹಾಗೂ ರಾಜಕೀಯ ವಲಯದ ಗಣ್ಯರು ಭಾಗಿಯಾಗಲಿದ್ದಾರೆ.