NITK ಸುರತ್ಕಲ್: ಸುಧಾರಿತ ನೀರು ಶುದ್ಧೀಕರಣ ಘಟಕ ಉದ್ಘಾಟನೆ

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್ಐಟಿಕೆ ) ಸುರತ್ಕಲ್ನಲ್ಲಿ ಪ್ರತಿದಿನ ಒಂದು ಮಿಲಿಯನ್ ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ನೀರು ಶುದ್ದೀಕರಣ ಘಟಕ ಮಂಗಳವಾರ ಆರಂಭಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೆಟ್ರೋನೆಟ್ ಎಂಎಚ್ಬಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ 1989ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ಯಾಚ್ನ ಎನ್ಐಟಿಕೆ ಹಳೆಯ ವಿದ್ಯಾರ್ಥಿ ಸುಧೀರ್ ಕುಮಾರ್ ಮತ್ತು ಎನ್ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ. ಬಿ. ರವಿ ನೆರವೇರಿಸಿದರು.
ಎನ್ಐಟಿಕೆ ಹಳೆಯ ವಿದ್ಯಾರ್ಥಿಯಾಗಿರುವುದರಿಂದ ಈ ಯೋಜನೆಯನ್ನು ಎನ್ಐಟಿಕೆಯಲ್ಲಿ ಕೈಗೊಳ್ಳುವುದು ವಿಶೇಷ ಗೌರವವಾಗಿದೆ ಎಂದು ತಿಳಿಸಿದರು.


ಎನ್ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು”ಕಳೆದ ವರ್ಷ ಕ್ಯಾಂಪಸ್ನ ಉತ್ತರ-ಪೂರ್ವ ಭಾಗದಲ್ಲಿ ಸುಮಾರು 30 ಮಿಲಿಯನ್ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ಜಲಾಶಯವನ್ನು ನಿರ್ಮಿಸಲಾಗಿತ್ತು. ಈ ಶೋಧನಾ ಘಟಕವು ಅದರ ನೀರನ್ನು ಹಾಗೆಯೇ ಕ್ಯಾಂಪಸ್ನ ಇತರ ಮೂಲಗಳಿಂದ ಪಡೆಯುವ ನೀರನ್ನು, ಬೇಸಿಗೆ ತಿಂಗಳಲ್ಲಿ ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಕೊರತೆಯನ್ನು ಪೂರೈಸಲು ಬಳಸಲು ಸಾಧ್ಯವಾಗುತ್ತದೆ.” ಅವರು ಹೇಳಿದರು
ಈ ಘಟಕವು ಕ್ಯಾಂಪಸ್ನ ಟ್ಯೂಬ್ವೆಲ್ಗಳು ಮತ್ತು ಓಪನ್ವೆಲ್ಗಳಿಂದ ಪಂಪ್ ಮಾಡಲಾದ ಕಚ್ಚಾ ನೀರನ್ನು ಶುದ್ದೀಕರಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಪೆಟ್ರೋನೆಟ್ನ ತಾಂತ್ರಿಕ ಮುಖ್ಯಸ್ಥೆ ಸೈಸುಧಮ್ಮಿ, ಕಾರ್ಯಾಚರಣೆ ಮುಖ್ಯಸ್ಥ ಉದಯ ಪೈ, ಜೊತೆಗೆ ರಿಜಿಸ್ಟ್ರಾರ್ (ಪ್ರಭಾರ) ಪ್ರೊ.ಕುಮಾರ್ ಜಿ.ಎನ್, ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ. ವೆಂಕಟೇಶ ಪೆರುಮಾಳ್, ಹಳೆಯ ವಿದ್ಯಾರ್ಥಿ ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಪ್ರಸನ್ನ ಬೆಳೂರು, ಹಾಗೂ ಇತರ ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.