ಮಾರ್-ಎ-ಲಾಗೋ ಭದ್ರತಾ ವಲಯಕ್ಕೆ ನುಸುಳಲು ಯತ್ನ: ಸೀಕ್ರೆಟ್ ಸರ್ವಿಸ್ ಗುಂಡಿಗೆ ಯುವಕ ಬಲಿ

ವಾಷಿಂಗ್ಟನ್: ಫ್ಲೋರಿಡಾದ (Florida) ವೆಸ್ಟ್ ಪಾಮ್ ಬೀಚ್ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾರ್-ಎ-ಲಾಗೊ ರೆಸಾರ್ಟ್ಗೆ (Mar-a-Lago Resort) ನುಗ್ಗಿದ್ದ 20 ವರ್ಷದ ಯುವಕನನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್ಗಳು (US Secret Service) ಹಾರಿಸಿ ಕೊಂದಿದ್ದಾರೆ.

ರೆಸಾರ್ಟ್ನ ಉತ್ತರ ಗೇಟ್ಗೆ ನುಗ್ಗಿ ಅನಧಿಕೃತ ಪ್ರವೇಶಕ್ಕೆ ಯತ್ನಿಸುತ್ತಿದ್ದಾಗ ಹತ್ಯೆ ಮಾಡಲಾಗಿದೆ. ಯುವಕ ನುಗ್ಗಿದ ಸಮಯದಲ್ಲಿ ಟ್ರಂಪ್ ರಾಜಧಾನಿ ವಾಷಿಂಗ್ಟನ್ನಲ್ಲಿದ್ದರು
ಯುವಕ ಶಾಟ್ಗನ್ನಂತೆ ಕಾಣುವ ಆಯುಧ ಮತ್ತು ಇಂಧನ ಕ್ಯಾನ್ ಹೊತ್ತುಕೊಂಡು ಹೋಗುತ್ತಿದ್ದ ಎಂದು ವರದಿಯಾಗಿದೆ. ಪ್ರಕರಣವನ್ನು ಈಗ ಎಫ್ಬಿಐ, ಸೀಕ್ರೆಟ್ ಸರ್ವಿಸ್ ಮತ್ತು ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.