Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಶ್ಮೀರ: 20 ಬಾರಿ ಸಾವಿನಿಂದ ಪಾರಾಗಿದ್ದ ಜೈಷೆ ಉಗ್ರ ಸೈಫುಲ್ಲಾ ಸೇರಿ ಮೂವರು ಉಗ್ರರ ಸಂಹಾರ

Spread the love

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್​ನಲ್ಲಿ (Kishtwar) ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಕೊಂದುಹಾಕಿದ್ದಾರೆ. ಈ ಮೂವರಲ್ಲಿ ಒಬ್ಬಾತ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ಸೈಫುಲ್ಲಾ ಎಂದು ಹೇಳಲಾಗಿದೆ. ಈ ಪಾಕ್ ಮೂಲದ ಉಗ್ರಗಾಮಿ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ. ಕಳೆದ ಎರಡು ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ತಿರುಗುತ್ತಿರುತ್ತಾನೆ. 20ಕ್ಕೂ ಹೆಚ್ಚು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿರುತ್ತಾನೆ. ಕೊನೆಗೆ ಕಿಶ್ತವಾರ್​ನಲ್ಲಿ ಎನ್​ಕೌಂಟರ್​ನಲ್ಲಿ ಆತನ ಸಂಹಾರವಾಗಿದೆ.

ಕಿಶ್ತವಾರ್​ನಲ್ಲಿ ಉಗ್ರಗಾಮಿಗಳು ನುಸುಳಿದ್ದಾರೆ ಎಂದು ಗುಪ್ತಚರರಿಂದ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಭದ್ರತಾ ಪಡೆಗಳು ಕಾರ್ಯಾಚರಣೆ ಶುರು ಮಾಡಿವೆ. ಗುಡ್ಡದ ಬಳಿ ಮಣ್ಣಿನ ಮನೆಯೊಂದರ ಒಳಗೆ ಉಗ್ರರು ಇರುವ ಜಾಗಕ್ಕೆ ಭದ್ರತಾ ಪಡೆಗಳು ಹೋಗುತ್ತಿದ್ದಂತೆಯೇ, ಉಗ್ರರಿಂದ ಗುಂಡಿನ ದಾಳಿಯಾಗುತ್ತದೆ. ಯೋಧರು ಪ್ರತಿದಾಳಿ ನಡೆಸುತ್ತಾರೆ. ಇದರಲ್ಲಿ ಮೂವರು ಉಗ್ರರು ಹತ್ಯೆಗೊಳ್ಳುತ್ತಾರೆ.

ಎರಡು ಅಸ್ಸಾಲ್ಟ್ ರೈಫಲ್​ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ತಂಡಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಪೊಲೀಸ್, ಸಿಆರ್​ಪಿಎಫ್ ಮತ್ತು ವಿಶೇಷ ಪಡೆಗಳು ಇದ್ದವು.

ಇದೇ ಕಿಶ್ತವಾರ್​ನಲ್ಲಿ ಇತ್ತೀಚೆಗೆ ಹಲವು ಬಾರಿ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗಗಳು ನಡೆದಿವೆ. ಇತ್ತೀಚೆಗೆ ನಡೆದ ಎನ್​ಕೌಂಟ್​ನಲ್ಲಿ ಜೇಷೆ ಉಗ್ರ ಆದಿಲ್ ಎಂಬಾತನನ್ನು ಗುಂಡಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು.

ಕಿಶ್ತವಾರ್​ನ ಛಾತ್ರೂ ಅರಣ್ಯ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಐದಾರು ಬಾರಿ ಎನ್​ಕೌಂಟರ್ ಪ್ರಕರಣಗಳು ನಡೆದಿವೆ. ತ್ರಾಶಿ ಐ ಆಪರೇಷನ್ ಕೈಗೊಂಡಿದ್ದ ಭದ್ರತಾ ಪಡೆಗಳು ಕಿಶ್ತವಾರ್​ನ ಛಾತ್ರೂ, ಸೋನ್ನಾರ್, ದೋಲ್ಗಂ, ಡಿಚ್ಚರ್ ಮೊದಲಾದ ಸ್ಥಳಗಳಲ್ಲಿ ಉಗ್ರರ ಬೆನ್ನಟ್ಟಿ ಹೋಗಿದ್ದವು. ಈ ಕಿಶ್ತವಾರ್ ಪ್ರದೇಶವು ಬಹಳ ಕ್ಷಿಷ್ಟಕರವಾದ ದಟ್ಟ ಅರಣ್ಯ ಮತ್ತು ಗುಡ್ಡಗಾಡು ಇರುವ ಸ್ಥಳವಾಗಿದ್ದು, ಉಗ್ರರಿಗೆ ಅಡಗಿಕೊಳ್ಳಲು ಪ್ರಶಸ್ತ ಎನಿಸಿದೆ.


Spread the love
Share:

administrator

Leave a Reply

Your email address will not be published. Required fields are marked *