ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿ ಬಂದ್; ಡಿಜಿಟಲ್ ಪಾವತಿ ಕಡ್ಡಾಯ

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ತೀರ್ಮಾನ ಕೈಗೊಂಡಿದ್ದು, ಹೊಸ ಹಣಕಾಸು ವರ್ಷದ ಆರಂಭ ಅಂದರೆ ಏಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಪ್ಲಾಝಾಗಳಲ್ಲಿ ನಗದು ಹಣ ಪಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ.ವಾಹನ ಚಾಲಕರು ಟೋಲ್ ಮೊತ್ತವನ್ನು ಕಡ್ಡಾಯವಾಗಿ ಫಾಸ್ಟ್ಯಾಗ್ (FASTag) ಅಥವಾ ಯುಪಿಐ (UPI) ಮೂಲಕವೇ ಪಾವತಿಸಬೇಕಾಗುತ್ತದೆ.ಸದ್ಯದ ನಿಯಮದಂತೆ ಫಾಸ್ಟ್ಯಾಗ್ ಇಲ್ಲದ ವಾಹನಗಳು ನಗದು ನೀಡಿದರೆ ದುಪ್ಪಟ್ಟು ಹಣ ತೆರಬೇಕಿತ್ತು. ಇನ್ನು ಮುಂದೆ ನಗದು ಪಾವತಿ ಇರುವುದಿಲ್ಲ. ಯುಪಿಐ ಮೂಲಕ ಪಾವತಿಸಿದರೆ ಸಾಮಾನ್ಯ ಸುಂಕದ 1.25 ರಷ್ಟು ಹಣ ಪಾವತಿಸಬೇಕಾಗುತ್ತದೆ.

ಸದ್ಯ ಟೋಲ್ ಪ್ಲಾಝಾಗಳಲ್ಲಿ ಕೇವಲ ಶೇ. 1 ರಷ್ಟು ಮಾತ್ರ ನಗದು ವ್ಯವಹಾರ ನಡೆಯುತ್ತಿದ್ದು, ಇದನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಓವರ್‌ಲೋಡ್‌ನಂತಹ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನೂ ಡಿಜಿಟಲ್ ಮೂಲಕವೇ ಪಡೆಯುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ.