Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಟಿ ಪ್ರತ್ಯುಷಾ ಸಾ*ವು ಪ್ರಕರಣ: ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟ!

Spread the love

23 ವರ್ಷಗಳ ಹಿಂದಿನ ನಟಿ ಪ್ರತ್ಯುಷ್ಯ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ನೀಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿದ್ಧಾರ್ಥ ರೆಡ್ಡಿಯನ್ನು ದೋಷಿ ಎಂದು ಘೋಷಿಸಿದ್ದು, ಆತನ ಅರ್ಜಿಯನ್ನು ವಜಾಗೊಳಿಸಿದೆ.23 ವರ್ಷಗಳ ಹಿಂದೆ ನಡೆದ ತೆಲುಗು ಹಾಗೂ ತಮಿಳು ನಟಿ ಪ್ರತ್ಯುಷ್ಯ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನಟಿ ಪ್ರತ್ಯುಷದು ಕೊಲೆ ಅಲ್ಲ. ಆದರೆ, ಆದರೆ ಆತ್ಮಹತ್ಯೆ ಎಂದು ಹೇಳಿದೆ. 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷೆ ನೀಡಿರುವುದು ಸರಿ ಇದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿದ್ಧಾರ್ಥ ರೆಡ್ಡಿ ದೋಷಿ ಎಂದು ತೀರ್ಪು ನೀಡಿದೆ.ಹೈಕೋಟ್೯ ತೀರ್ಪು ಪ್ರಶ್ನಿಸಿ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ನ್ಯಾ ರಾಜೇಶ್ ಬಿಂದಾಲ್ ಮತ್ತು ನ್ಯಾ ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿಯನ್ನು ವಜಾ ಮಾಡಿದೆ. ಇದೇ ವೇಳೆ ಪ್ರತ್ಯುಷ ಅವರ ತಾಯಿ ಸರೋಜಿನಿ ದೇವಿ, ತನ್ನ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನೂ ಕೂಡ ಕೋರ್ಟ್‌ ವಜಾ ಮಾಡಿದೆ.ಕತ್ತು ಹಿಸುಕಿ ಕೊಲೆ ಮಾಡಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸಾಕಷ್ಟು ವೈದ್ಯಕೀಯ ಪುರಾವೆಗಳು ವಿಷಪ್ರಾಶನದಿಂದಾಗಿ ಸಾವನ್ನು ಸಾಬೀತುಪಡಿಸುತ್ತವೆ.

ಇದು ಕೊಲೆ ಅನ್ನಲು ಯಾವುದೇ ಬಲವಾದ ಸಾಕ್ಷಿಗಳಿಲ್ಲ ಎಂದಿದೆ. ನ್ಯೂರಾನ್‌ಟೋನ್‌ ಖರೀದಿ ಮಾಡಿರುವುದು ಕೂಡ ಆಕೆಯ ವಿಚಾರದಲ್ಲಿ ಸಾಬೀತಾಗಿದೆ ಎಂದು ಪೀಠ ಹೇಳಿದೆ.ಪ್ರತ್ಯುಷ ಹಾಗೂ ರೆಡ್ಡಿ ನಡುವಿನ ಸಂಬಂಧವನ್ನು ಅವರ ಪೋಷಕರು ವಿರೋಧಿಸಿದ್ದರು. ಇಬ್ಬರು ಒಟ್ಟಿಗೆ ವಿಷ ಸೇವಿಸಿದ್ದರು. ಆದರೆ, ರೆಡ್ಡಿ ಬದುಕುಳಿದರು. ನಂತರ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು, ನಂತರ 2004 ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ಅದನ್ನು ಎರಡು ವರ್ಷಗಳಿಗೆ ಇಳಿಸಿತು.ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಪ್ರತ್ಯುಷ್ಯ ಅವರ ತಾಯಿ ಕೂಡ ರೆಡ್ಡಿಗೆ ಶಿಕ್ಷೆಯನ್ನು ಕಡಿಮೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ತಮ್ಮ ಮಗಳ ಮೇಲೆ ಅ*ತ್ಯಾಚಾರ ಮಾಡಿ ವಿಷಪ್ರಾಶನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.


Spread the love
Share:

administrator

Leave a Reply

Your email address will not be published. Required fields are marked *