Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈ ಲೋಕಲ್ ರೈಲಿನಲ್ಲಿ ಬುರ್ಖಾಧಾರಿ ಪುರುಷನ ಹೈಡ್ರಾಮಾ!

Spread the love

ಮುಂಬೈ: ಮುಂಬೈ ಕೇಂದ್ರ ರೈಲ್ವೆಯ ಲೇಡೀಸ್ ಬೋಗಿಯೊಂದರಲ್ಲಿ ಬುರ್ಖಾ ಧರಿಸಿ ಪುರುಷನೋರ್ವ ಪ್ರಯಾಣಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ರೈಲ್ವೆ ರಕ್ಷಣಾ ಪಡೆ ಪ್ರಕರಣ ದಾಖಲಿಸಿದೆ. ಶುಕ್ರವಾರ ಮುಂಬೈನ ರೈಲೊಂದರ ಲೇಡೀಸ್ ಬೋಗಿಯಲ್ಲಿ ಪುರುಷನೋರ್ವ ಮಹಿಳೆಯಂತೆ ಬುರ್ಖಾ ಧರಿಸಿ ಪ್ರಯಾಣಿಸಿದ್ದಾನೆ.

ಲೇಡೀಸ್ ಕೋಚ್‌ನಲ್ಲಿರುವ ಬುರ್ಖಾಧಾರಿಯೂ ಮಹಿಳೆ ಅಲ್ಲ ಪುರುಷ ಎಂಬುದು ಅಲ್ಲಿದ್ದ ಇತರ ಮಹಿಳಾ ಪ್ರಯಾಣಿಕರ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿದ್ದ ಮಹಿಳಾ ಪ್ರಯಾಣಿಕರು ಆ ಬುರ್ಖಾಧಾರಿ ವ್ಯಕ್ತಿ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ರೈಲ್ವೆ ರಕ್ಷಣಾ ದಳ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಅಧಿಕಾರಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌(CSMT)ಗೆ ಹೋಗುತ್ತಿದ್ದ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಪುರುಷನೋರ್ವ ಬುರ್ಖಾ ಧರಿಸಿ ಪಯಣಿಸುತ್ತಿದ್ದಾನೆ ಎಂಬ ಅನುಮಾನ ಆ ಬೋಗಿಯಲ್ಲಿದ್ದ ಇತರ ಮಹಿಳಾ ಪ್ರಯಾಣಿಕರಿಗೆ ಬಂದಿದೆ. ಅವರು ಆತನನ್ನು ಪ್ರಶ್ನಿಸಲು ಮುಂದಾದಾಗ ಆತ ಪುರುಷ ಎಂಬುದು ತಿಳಿದು ಬಂದಿದೆ. ಮಹಿಳೆಯರು ಆತನನ್ನು ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಬಂದಿದ್ದಕ್ಕೆ ಪ್ರಶ್ನಿಸಿದ್ದಲ್ಲದೇ ಆ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಮುಂಬರುವ ಘಾಟ್‌ಕೋಪರ್ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹೀಗಾಗಿ ಭಯಗೊಂಡ ಆತ ಈ ಮಹಿಳೆಯರಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಕೆಳಗೆ ಹಾರಿದ್ದಾನೆ. ರೈಲು ನಿಲ್ಲುವ ಮೊದಲೇ ಆತ ರೈಲಿನಿಂದ ಕೆಳಗೆ ಹಾರಿ ಬಳಿಕ ರೈಲಿನ ಇತರ ಹಳಿಗಳ ಮೇಲೆ ಓಡಿ ಹೋಗಿದ್ದಾನೆ. ಬಳಿಕ ಆತ ಕಜ್ರತ್‌ನಿಂದ ಬರುತ್ತಿದ್ದ ರೈಲೊಂದಕ್ಕೆ ಮತ್ತೊಂದು ಪ್ಲಾಟ್‌ಫಾರ್ಮ್‌ನಿಂದ ಹತ್ತಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರೈಲು ಘಟ್ಕೊಪರ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಹಿಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಶುರು ಮಾಡಿದ್ದು, ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಮುಲುಂಡ್ ನಿಲ್ದಾಣದಲ್ಲಿ ಕರ್ಜತ್ ರೈಲಿನಲ್ಲಿ ಆತನಿಗಾಗಿ ಶೋಧ ನಡೆಸಿದ್ದಾರೆ. ಆದರೆ ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ., ಏಕೆಂದರೆ ಅವನು ಆಗಲೇ ರೈಲಿನಿಂದ ಇಳಿದಿದ್ದ. ಆದರೆ ಮಹಿಳಾ ಕೋಚ್‌ನಲ್ಲಿ ಅನಧಿಕೃತವಾಗಿ ಪ್ರಯಾಣಿಸಿದ್ದಕ್ಕಾಗಿ ಆರ್‌ಪಿಎಫ್ ಭಾರತೀಯ ರೈಲ್ವೆ ಕಾಯ್ದೆಯಡಿ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದೆ.


Spread the love
Share:

administrator

Leave a Reply

Your email address will not be published. Required fields are marked *