Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“‘ಜೈ ಜವಾನ್, ಜೈ ಕಿಸಾನ್’ ಈಗ ‘ಡೈ ಜವಾನ್, ಡೈ ಕಿಸಾನ್’: ನಟ ಕಿಶೋರ್ ಆಕ್ರೋಶ”

Spread the love

ಬೆಂಗಳೂರು: ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಗೆ ವಿರುದ್ಧವಾಗಿ ಮೋದಿ ಸರಕಾರದ ನೀತಿಗಳು ‘ಸಾಯಲಿ ಸೈನಿಕರು, ಸಾಯಲಿ ರೈತರು’ ಎಂಬ ಅರ್ಥಕ್ಕೆ ತಿರುಗಿವೆ ಎಂದು ನಟ ಕಿಶೋ‌ರ್ ಕುಮಾ‌ರ್ ಅವರು ಟೀಕಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರೈತ ಹೋರಾಟದ ವೇಳೆ ಹುತಾತ್ಮರಾದ ರೈತರ ಕುರಿತು “ನನಗಾಗಿ ಸತ್ತರೆ ಏನು?” ಎಂದು ಇವರೇ ಕೇಳಿದ್ದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಕುರಿತು ಕಾಶ್ಮೀರದ ದಿವಂಗತ ಗವರ್ನರ್ ಸತ್ಯಪಾಲ್ ಮಲಿಕ್ ಅವರ ಹೇಳಿಕೆಗಳನ್ನು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ.

ಅದೇ ಮನುಷ್ಯ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ಮೃತದೇಹಗಳನ್ನು ಮುಂದಿಟ್ಟುಕೊಂಡು ಮತ ಕೇಳಿದ್ದನ್ನು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ.

ಯಾರೋ ನಿರ್ಧರಿಸಿದ ಆಪರೇಷನ್ ಸಿಂಧೂರದಂತೆ ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರದ ಕರಾರಿನಂತೆ ಅದರ ಬಗ್ಗೆ ಏನೂ ಗೊತ್ತಿಲ್ಲದ, ಅಧಿಕಾರಕ್ಕಾಗಿ ಯಾವ ನೀಚ ಕೃತ್ಯಕ್ಕೂ ಹೇಸದ ಮೂರ್ಖರ ದಂಡು ಮತ್ತು ಅವರ ಮೂಕ ನಾಯಕನ ಪ್ರತಿಕ್ರಿಯೆಗಳನ್ನು ನೋಡಿದರೆ ಎಪ್ಪಿನ್ ಫೈಲ್, ಅದಾನಿ ಕೇಸುಗಳಿಗಾಗಿ ದೇಶದ ಭದ್ರತೆ ಮತ್ತು ದೇಶದ ರೈತರ ಭವಿಷ್ಯ ಮಾರಾಟವಾಗಿದ್ದು ಕಾಕತಾಳೀಯವಲ್ಲ ಎಂದು ಕಿಶೋರ್ ಕುಮಾ‌ರ್ ಆರೋಪಿಸಿದ್ದಾರೆ.

ಇದಕ್ಕೇ ಘೋಷಿಸಿದ್ದೇನು ‘ಅಬ್ಬಿ ಬಾರ್ ಟ್ರಂಪ್ ಸರ್ಕಾರ್’ ಎಂದು. ಅದು ಭಾರತದಲ್ಲಿ ಎಂದು ತಿಳಿಯದ ನಾವೇ ದಡ್ಡರು ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *