ಎಚ್ಚರಿಕೆ ನೀಡಿದರೂ ಕೇಳದಿದ್ದಕ್ಕೆ ಪೌರಕಾರ್ಮಿಕರಿಂದ ವಿಭಿನ್ನವಾಗಿ ತಕ್ಕ ಪಾಠ

ಹಾಸನ: ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದವರಿಗೆ ಹಾಸನ ಮಹಾನಗರಪಾಲಿಕೆ (Hassan Municipal Corporation) ಸಿಬ್ಬಂದಿ ತಕ್ಕ ಪಾಠ ಕಲಿಸಿದ್ದಾರೆ. ಕಸ ಬಿಸಾಡಿದ್ದವರ ಮನೆಯ ಕಾಂಪೌಂಡ್ ಒಳಗೆ ಒಂದು ಲೋಡ್ ಕಸವನ್ನು ಸಿಬ್ಬಂದಿ ಸುರಿದಿದ್ದಾರೆ.

ಹಾಸನ (Hassan) ನಗರದ ಉದಯಗಿರಿ ಬಡಾವಣೆಗೆ ಹೋಗುವ ರಸ್ತೆಯ ಕರಿಯಪ್ಪ-ದ್ಯಾವಮ್ಮ ಎಂಬುವವರಿಗೆ ಸೇರಿದ ಮನೆಯವರು ರಸ್ತೆ ಬದಿ ಕಸ ಎಸೆಯುತ್ತಿದ್ದರು. ಹಲವು ಬಾರಿ ಮಹಾನಗರಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರ. ಆದರೂ ರಸ್ತೆ ಬದಿ ಕಸ ಎಸೆಯುತ್ತಿದ್ದರು.
ಬೆಳಿಗ್ಗೆ ಪೌರಕಾರ್ಮಿಕರು ಒಂದು ಲೋಡ್ ಕಸವನ್ನು ಮನೆಯ ಆವರಣಕ್ಕೆ ಸುರಿದಿದ್ದಾರೆ. ಈ ವೇಳೆ ಮಹಿಳೆ (Woman) ಮಹಾನಗರಪಾಲಿಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.