Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜಕೀಯ ರಂಗದಲ್ಲಿ ‘ಟಾಕ್ಸಿಕ್’ ಹವಾ: ಕುಮಾರಸ್ವಾಮಿ ಅಭಿಮಾನಿಗಳಿಂದ ಎಐ ವಿಡಿಯೋ ವೈರಲ್; ‘ಡ್ಯಾಡಿ ಈಸ್ ಬ್ಯಾಕ್’ ಎಂದ ಹೆಚ್‌ಡಿಕೆ!

Spread the love

ಬೆಂಗಳೂರು: ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು ದೃಶ್ಯಗಳ ಬಗ್ಗೆ ಬಿಸಿಬಿಸಿ ಚರ್ಚೆ ಒಂದೆಡೆಯಾಗುತ್ತಿದ್ದರೆ, ಅದರಲ್ಲಿ ಹೀರೋ ಯಶ್ ಹೇಳುವ ಡ್ಯಾಡಿ ಈಸ್ ಹೋಂ ಡೈಲಾಗ್ ಭಾರೀ ಫೇಮಸ್ ಆಗಿದೆ.

ಇದೀಗ ಟಾಕ್ಸಿಕ್ ಸಿನಿಮಾ ಟೀಸರ್ ಮಾದರಿಯಲ್ಲಿಯೇ ಮಾಜಿ ಸಿಎಂ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ AI ಮೂಲಕ ವಿಡಿಯೋ ಒಂದನ್ನು ಎಡಿಟ್ ಮಾಡಿ ಹರಿ ಬಿಟ್ಟಿದ್ದು, ಭಾರಿ ವೈರಲ್ ಆಗಿದೆ. ಇಲ್ಲಿ ಡೈಲಾಗ್ ರಾಜ್ಯ ರಾಜಕಾರಣಕ್ಕೆ, 2028ರ ಚುನಾವಣೆಗೆ ಸಂಬಂಧಿಸಿ ಇದೆ.

ಎಐ ಸೃಷ್ಟಿತ ವಿಡಿಯೊದಲ್ಲಿ ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಲು ಬಯಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆಂದು ನಿಮಗೆ ಅನಿಸುತ್ತಿದೆಯೇ ಎಂದು ಕೇಳುತ್ತಾರೆ

ಆಗ ಡಿಕೆ ಶಿವಕುಮಾರ್ ನನಗನ್ನಿಸುವುದಿಲ್ಲ ಸರ್ ಎಂದಾಗ ಕಾರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ರಾಯಲ್ ಎಂಟ್ರಿ ಕೊಡ್ತಾರೆ. ಅವರು ಇಲ್ಲಿಗೆ ಬರಬಾರದಿತ್ತು ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಕೊನೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಡ್ಯಾಡಿ ಇಸ್ ಹೋಂ ಎಂದು ಡೈಲಾಗ್ ಹೇಳುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್‌, ಜೆಡಿಎಸ್‌ ಬಿಜೆಪಿಯೊಂದಿಗೆ ವೀಲಿನವಾಗಲಿದೆ, ಕರ್ನಾಟಕದಲ್ಲಿ 2 ಪಕ್ಷಗಳು ಇರಲಿದೆ ಎಂಬ ಮಾತುಗಳನ್ನಾಡಿದ್ದರು. ಇದಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ. 2028 ರ ಮಹಾಕದನಕ್ಕೆ ದೆಹಲಿ ಮಟ್ಟದಲ್ಲೇ ರಣತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *