Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಂಪಿಯಲ್ಲಿ ವಿದೇಶಿ ಪ್ರವಾಸಿಗನ ಸಾಹಸಮಯ ರಕ್ಷಣೆ: 2 ದಿನ ಗುಡ್ಡದ ಮೇಲೆ ನರಳಾಡಿದ್ದ ಫ್ರಾನ್ಸ್ ಪ್ರಜೆ!

Spread the love

ಬಳ್ಳಾರಿ: ವಿದೇಶಿ ಪ್ರಜೆಯೊಬ್ಬರು ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಎರಡು ದಿನಗಳ ಕಾಲ ನರಳಾಡಿರುವ ಘಟನೆ ವಿಶ್ವವಿಖ್ಯಾತ ಹಂಪಿಯ (Hampi) ಅಷ್ಟಭುಜ ಸ್ನಾನದ ಗುಡ್ಡದ ಹಿಂಭಾಗದಲ್ಲಿ ನಡೆದಿದೆ.

ಪ್ರಾನ್ಸ್ ಮೂಲದ (France Tourist) ಬ್ರೋನೋ ರೋಜರ್ (52) ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ವ್ಯಕ್ತಿ. ಬ್ರೋನೋ ರೋಜರ್ 24ರ ಸಾಯಂಕಾಲ 6 ಗಂಟೆಗೆ ಅಷ್ಟಭುಜ ಸ್ನಾನದ ಕೊಳ್ಳದ ಗುಡ್ಡದ ಹಿಂಭಾಗ, ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಆಗ ಕಾಲು ಜಾರಿ ಬಿದ್ದಿದ್ದರು. ಎರಡು ದಿನಗಳ ಕಾಲ ಗುಡ್ಡದ ಹಿಂಭಾಗದಲ್ಲೇ ನೊವಿನಿಂದ ಕಾಲ ಕಳೆದಿದ್ದರು

ಆ ಬಳಿಕ ಅಲ್ಲೇ ಇದ್ದ ಬಾಳೆ ತೋಟಕ್ಕೆ ತೆವಳಿಕೊಂಡೆ ಬಂದಿದ್ದ. ಬ್ರೋನೋ ರೋಜರ್‌ನನ್ನು ಗಮನಿಸಿದ ಸ್ಥಳಿಯ ರೈತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಪುರಾತತ್ವ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *