Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿರತೆ ಬೋನಿಗೆ ಬಿದ್ದ ರೈತ: ಮೂರು ಗಂಟೆ ಹೈಡ್ರಾಮಾ!

Spread the love

ಚಾಮರಾಜನಗರ : ಚಾಮರಾಜನಗರದಲ್ಲಿ ಚಿರತೆ ಸೆರೆಗೆ ಇಟ್ಟಿದ್ದ ಬೋನಿಗೆ ರೈತನೊಬ್ಬ ಲಾಕ್ ಆಗಿರುವ ಘಟನೆ ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.ಕುತೂಹಲಕ್ಕೆ ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿದ್ದ ರೈತ 3 ಗಂಟೆ ಕಾಲ ಲಾಕ್ ಆಗಿದ್ದಾನೆ.

ಗ್ರಾಮದ ಕಿಟ್ಟಿ ಎಂಬ ರೈತ ಮೂರು ಗಂಟೆಗಳ ಕಾಲ ಬೋನಿನೊಳಗೆ ಲಾಕ್ ಆಗಿದ್ದರು.ಬೋನಿನ ಬಾಗಿಲು ತೆರೆಯಲು ಯತ್ನಿಸಿದರೂ ಕೂಡ ಆಗದೇ ವಿಫಲರಾಗಿದ್ದಾರೆ. ಬಳಿಕ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದು, ಕಿಟ್ಟಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ರೈತರು ಬಂಧ ಮುಕ್ತಗೊಳಿಸಿದ್ದಾರೆ.

ಗ್ರಾಮದಲ್ಲಿನ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿತ್ತು. ಈ ಹಿನ್ನೆಲೆ ಚಿರತೆ ಸೆರೆಗೆ ರುದ್ರ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು. ಈ ವೇಳೆ ಕಿಟ್ಟಿ ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನ ಒಳಹೊಕ್ಕಿದ್ದರು. ಈ ವೇಳೆ ಆಟೋಮ್ಯಾಟಿಕ್ ಆಗಿ ಮುಚ್ಚಿಕೊಂಡ ಬೋನಿನ ಬಾಗಿಲು ಲಾಕ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *