Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಭಾನುವಾರ ಹಳದಿ ಮಾರ್ಗದಲ್ಲಿ ಸಂಚಾರ ಒಂದು ಗಂಟೆ ವಿಳಂಬ; ಬೆಳಿಗ್ಗೆ 8ಕ್ಕೆ ರೈಲು ಆರಂಭ!

Spread the love

ಬೆಂಗಳೂರು: ಇದೇ ಭಾನುವಾರ (ಡಿ.21) ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Yellow Line) ಮೆಟ್ರೋ ಸೇವೆಗಳು ಒಂದು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ಮಾಹಿತಿ ನೀಡಿದೆ.

ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ತುರ್ತು ವ್ಯವಸ್ಥಾ ನಿರ್ವಹಣೆ, ನವೀಕರಣ ಕಾರ್ಯಗಳ ಹಿನ್ನೆಲೆ ಇದೇ ಡಿ.21 (ಭಾನುವಾರ) ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಗಲಿವೆ. ಈ ಹಿನ್ನೆಲೆ ಹಳದಿ ಮಾರ್ಗದಲ್ಲಿ ಮೊದಲ ರೈಲು ಸೇವೆ ಬೆಳಿಗ್ಗೆ 7.00 ಗಂಟೆಯ ಬದಲಾಗಿ ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭವಾಗಲಿದ್ದು, ಬಳಿಕ ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯಾಚರಿಸಲಿದೆ. ಈ ಬದಲಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ

ಇನ್ನೂ ಹಳದಿ ಮಾರ್ಗದ ಹೊರತಾಗಿ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ.

ಪ್ರಯಾಣಿಕರಿಗೆ ಉಂಟಾಗುವ ಯಾವುದೇ ಅಸೌಕರ್ಯಕ್ಕೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಂದ ನಿರಂತರ ಸಹಕಾರ ಮತ್ತು ಸಹನೆಯನ್ನು ಕೋರುತ್ತದೆ ಎಂದು ತಿಳಿಸಿದೆ


Spread the love
Share:

administrator

Leave a Reply

Your email address will not be published. Required fields are marked *