Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈತ ಯುವಕರಿಗೆ ಮದುವೆಯಾಗಲು 25 ಲಕ್ಷ ರೂ. ನೀಡಿ: ಸದನದಲ್ಲಿ ಸದಸ್ಯ ಪುಟ್ಟಣ್ಣ ಅಚ್ಚರಿಯ ಬೇಡಿಕೆ!

Spread the love

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಕೃಷಿ ಮಾಡ್ತಿರೋ ಯುವಕರಿಗೆ ಮದುವೆ ಆಗಲು ಹೆಣ್ಣು ಸಿಕ್ತಿಲ್ಲ. ಹೀಗಾಗಿ ಸರ್ಕಾರ ಇಂತಹ ಯುವಕರಿಗೆ ವಿಶೇಷ ಯೋಜನೆ ಜಾರಿ ಮಾಡಬೇಕು. 10 ರಿಂದ 25 ಲಕ್ಷ ರೂ.ವರೆಗೆ ಸಹಾಯಧನ ನೀಡಬೇಕು ಅಂತ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ (Puttanna) ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಶೂನ್ಯ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ಹೆಣ್ಣು ಸಿಕ್ತಿಲ್ಲ. ಸರ್ಕಾರ ಇಂತಹ ಯುವಕರಿಗೆ ಯೋಜನೆ ಘೋಷಣೆ ಮಾಡಬೇಕು. ಹೆಣ್ಣುಮಕ್ಕಳು ಸಿಗದೇ ತಾಲೂಕಿಗೊಂದು ಮಠ ಕಟ್ಟಿಕೊಡಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ನಡುವೆ ಚರ್ಚೆ ಆಗ್ತಿದೆ. ಮದುವೆ ಆಗದ ಯುವಕರು ದೇವಾಲಯಗಳಿಗೆ ಪಾದಯಾತ್ರೆ ಹೋಗ್ತಾ ಇದ್ದಾರೆ. ಕೃಷಿ ಮಾಡೋ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ ಎಂದು ತಿಳಿಸಿದ್ದಾರೆ

ಸರ್ಕಾರ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ವಿಶೇಷ ಯೋಜನೆ ರೂಪಿಸಬೇಕು. ಕನಿಷ್ಠ 10 ರಿಂದ 25 ಲಕ್ಷ ರೂ. ಮದುವೆ ಆಗದ ಯುವಕರಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದರು. ಸಭಾನಾಯಕ ಬೋಸರಾಜು ಸಿಎಂ ಅವರಿಂದ ಉತ್ತರ ಕೊಡಿಸುವ ಭರವಸೆ ಕೊಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *