Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರೀತಿಸಿ ಮದುವೆಯಾದ ಜೋಡಿಗೆ ಶಾಕ್: “ನೀವಿಬ್ಬರು ಅಣ್ಣ-ತಂಗಿ ಆಗಬೇಕು” ಎಂದ ಯುವಕನ ಕುಟುಂಬಸ್ಥರು; ಯುವತಿ ಆತ್ಮಹತ್ಯೆಗೆ ಯತ್ನ

Spread the love

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿ (Love Marriage) ಮನಗೆ ಬಂದ ಜೋಡಿಗೆ ಯುವಕನ ಮನೆಯವರು ಶಾಕ್‌ ಕೊಟ್ಟಿದ್ದಾರೆ.

ವರಸೆಯಲ್ಲಿ ನೀವಿಬ್ಬರು ಅಣ್ಣ-ತಂಗಿ ಆಗಬೇಕು, ಮದುವೆಗೆ ನಾವ್ ಒಪ್ಪಲ್ಲ ಅಂತ ಶಾಕ್ ಕೊಟ್ಟಿರೋ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ ಸುಕನ್ಯಾ ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಾಲಯವೊಂದರಲ್ಲಿ (Temple) ಮದುವೆಯಾಗಿದ್ರು.

ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಮನೆಗೆ ಬಂದಾಗ ಯುವಕನ ಮನೆಯವರು ʻನೀವಿಬ್ಬರು ವರಸೆಯಲ್ಲಿ ಅಣ್ಣ ತಂಗಿ ಆಗಬೇಕು. ಇದು ತಪ್ಪು ನಿಮ್ಮ ಮದುವೆ ಸರಿ ಅಲ್ಲʼ. ಸಂಬಂಧಿಕರೆಲ್ಲಾ ಬೈಕೊಳ್ತಾರೆ. ಅಂತ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನನಗೆ ಅದೇ ಯುವಕ ಬೇಕು ಅಂತ ಸುಕನ್ಯಾ ಪಟ್ಡು ಹಿಡಿದಿದ್ದಾಳೆ.


Spread the love
Share:

administrator

Leave a Reply

Your email address will not be published. Required fields are marked *