ವಿಚ್ಛೇದನಕ್ಕಾಗಿ ಪತ್ನಿಯ ಖಾಸಗಿ ಫೋಟೋಗಳನ್ನು ಅಪ್ಲೋಡ್ ಮಾಡಿದ ಆರೋಪ; ಪತಿಯ ಬಂಧನ

ಬೆಂಗಳೂರು : ಬೆಂಗಳೂರಲ್ಲಿ ಪಾಪಿ ಪತಿಯೊಬ್ಬ ಪತ್ನಿ ಡಿವೋರ್ಸ್ ಕೇಳಿದಕ್ಕೆ ಪತ್ನಿಯ ಖಾಸಗಿ ಫೋಟೋಗಳು ಅಪ್ಲೋಡ್ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾಲತಾಣದಲ್ಲಿ ಪತ್ನಿಯ ಖಾಸಗಿ ಫೋಟೋ ಅಪ್ಲೋಡ್ ಮಾಡಿದ್ದ ಪತಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಗೋವಿಂದರಾಜುವನ್ನು ಅಮೃತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋವಿಂದರಾಜು ಬಂದು ನಿತ್ಯ ಗಲಾಟೆ ಮಾಡಿದಕ್ಕೆ ಪತ್ನಿ ಡಿವೋರ್ಸ್ ಕೇಳಿದ್ದಾರೆ. ಪತಿ ಗೋವಿಂದರಾಜು ಆನ್ಲೈನ್ ಬೆಟ್ಟಿಂಗ್, ಕುಡಿತದ ಚಟಕ್ಕೆ ಹಣ ಕಳೆದುಕೊಂಡಿದ್ದ.
ಬಳಿಕ ಮನೆ ಬಿಟ್ಟು ಪಿಜಿಯಲ್ಲಿ ಗೋವಿಂದರಾಜು ಪತ್ನಿ ವಾಸವಿದ್ದರು. ಪಿಜಿ ಬಳಿಯೂ ಗೋವಿಂದರಾಜು ಹೋಗಿ ಗಲಾಟೆ ಮಾಡಿದ್ದ. ಘಟನೆ ಬಳಿಕ ಪತ್ನಿ ಡೈವೋರ್ಸ್ ಕೇಳಿದ್ದಾರೆ. ಇದೆ ದ್ವೇಷಕ್ಕೆ ಪತ್ನಿಯ ಖಾಸಗಿ ಫೋಟೋಗಳನ್ನ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಘಟನೆ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ನಿಯ ದೂರು ಆಧರಿಸಿ ಪತಿ ಗೋವಿಂದರಾಜುವನ್ನು ಅರೆಸ್ಟ್ ಮಾಡಿದ್ದಾರೆ.