Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖ್ಯಾತ ಬಾಲಿವುಡ್ ನಟ ಸತೀಶ್ ಶಾ (74) ನಿಧನ: ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ನಟ ಕೊನೆಯುಸಿರು

Spread the love

ಮುಂಬೈ : ಬಾಲಿವುಡ್‌ನ ಹಿರಿಯ ನಟ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಅವರು ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.

ಸಾರಾಭಾಯ್ ವರ್ಸಸ್ ಸಾರಾಭಾಯ್ ಮತ್ತು ಜಾನೆ ಭಿ ದೋ ಯಾರೋ ಎಂಬ ಟಿವಿ ಸೀರಿಯಲ್‌ಗಳ ಮೂಲಕ ಸತೀಶ್ ಶಾ ಖ್ಯಾತಿ ಪಡೆದಿದ್ದರು. ಅದರೊಂದಿಗೆ ಅವರು ಮೈ ಹೂ ನಾ (2004), ಕಲ್ ಹೋ ನಾ ಹೋ (2003), ಫನಾ (2006), ಮತ್ತು ಓಂ ಶಾಂತಿ ಓಂ (2007) ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ, ಅವರು ಅರ್ಚನಾ ಪುರಾನ್ ಸಿಂಗ್ ಅವರೊಂದಿಗೆ ಕಾಮಿಡಿ ಸರ್ಕಸ್ ಎಂಬ ಟಿವಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದರು.

ಸತೀಶ್ ಶಾ ಅವರ ನಿಧನಕ್ಕೆ ಹಾಸ್ಯನಟ ಜಾನಿ ಲಿವರ್ ದುಃಖ ವ್ಯಕ್ತಪಡಿಸಿದ್ದು, ಅವರು ಸುಮಾರು 40 ವರ್ಷಗಳ ಕಾಲ ನನ್ನ ಸ್ನೇಹಿತ ಎಂದು ಹೇಳಿದರು. ಸತೀಶ್ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಕೋಲ್ಕತ್ತಾದಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಅವರು ಒಂದೂವರೆ ತಿಂಗಳು ಅಲ್ಲೇ ಇದ್ದು, ಸಂಪೂರ್ಣವಾಗಿ ಗುಣಮುಖರಾಗಿ ಮರಳಿದರು. ಇಂದು ರಾತ್ರಿ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನಿಧನರಾದರು.

ಶನಿವಾರ ಬೆಳಿಗ್ಗೆ ನಾನು ಸತೀಶ್ ಶಾ ಜೊತೆ ಮಾತನಾಡುತ್ತಿದ್ದೆ. ನಾವು ಪ್ರತಿದಿನ ಮಾತನಾಡುತ್ತಿದ್ದೆವು, ಪರಸ್ಪರ ರೀಲ್‌ಗಳು ಮತ್ತು ಆಸಕ್ತಿದಾಯಕ ವೀಡಿಯೊಗಳನ್ನು ಕಳುಹಿಸುತ್ತಿದ್ದೆವು” ಎಂದು ಚಲನಚಿತ್ರ ನಿರ್ಮಾಪಕ ವಿವೇಕ್ ಶರ್ಮಾ ಹೇಳಿದ್ದಾರೆ.

ಸತೀಶ್ ಷಾ ಅವರ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹಳೆಯ ಸಹೋದ್ಯೋಗಿ ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಸತೀಶ್ ಶಾ ಸುಮಾರು ಒಂದೂವರೆ ವರ್ಷದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ನವೆಂಬರ್‌ನಲ್ಲಿ ನಾವು ಕೆಲಸ ಪ್ರಾರಂಭಿಸುತ್ತೇವೆ ಎಂದು ಅವರು ಇಂದು ಬೆಳಿಗ್ಗೆ ನನಗೆ ಹೇಳಿದರು. ಅವರು ನನಗೆ ಸೆಲ್ಫಿ ಕಳುಹಿಸಿ, “ನೋಡಿ, ನಾನು 20-22 ಕೆಜಿ ತೂಕ ಇಳಿಸಿಕೊಂಡಿದ್ದೇನೆ! ನಾನು ಈಗ ತುಂಬಾ ಸುಂದರವಾಗಿ ಕಾಣುತ್ತಿದ್ದೇನೆ” ಎಂದು ಹೇಳಿದ್ದರು ಎಂದಿದ್ದಾರೆ.

FTII ನಲ್ಲಿ ಅಧ್ಯಯನ ಮಾಡಿದ್ದ ಸತೀಶ್‌

ಮುಂಬೈನ ಮಾಂಡ್ವಿಯಲ್ಲಿ ಜನಿಸಿದ್ದ ಸತೀಶ್‌ ಶಾ, ಕ್ಸೇವಿಯರ್ಸ್ ಕಾಲೇಜಿನಲ್ಲಿ ಮತ್ತು ನಂತರ ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯಲ್ಲಿ ವ್ಯಾಸಂಗ ಮಾಡಿದರು. 1972 ರಲ್ಲಿ, ಸತೀಶ್ ಡಿಸೈನರ್ ಮಧು ಷಾ ಅವರನ್ನು ವಿವಾಹವಾದರು.

ಸತೀಶ್ 1970 ರಲ್ಲಿ ಬಾಲಿವುಡ್ ಚಿತ್ರ ಭಗವಾನ್ ಪರಶುರಾಮ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂದಿನಿಂದ 2014 ರವರೆಗೆ ಅವರು ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು 1984 ರಲ್ಲಿ ಯೇ ಜೊ ಹೈ ಜಿಂದಗಿ ಶೋ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು 55 ಕಂತುಗಳಲ್ಲಿ 55 ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು.

ಅದರ ನಂತರ ಅವರು ಫಿಲ್ಮಿ ಚಕ್ಕರ್, ಘರ್ ಜಮೈ, ಟಾಪ್ 10, ಸಾರಾಭಾಯ್ ವರ್ಸಸ್ ಸಾರಾಭಾಯ್ ಮತ್ತು ಕಾಮಿಡಿ ಸರ್ಕಸ್‌ನಂತಹ ಕಾರ್ಯಕ್ರಮಗಳ ಭಾಗವಾಗಿದ್ದರು.

ಕನ್ನಡದ ಏಕೈಕ ಸಿನಿಮಾದಲ್ಲಿ ನಟಿಸಿದ್ದ ಸತೀಶ್‌ ಶಾ

ಸತೀಶ್‌ ಶಾ ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದರು. ಟಿಬಿ ಶ್ರೀನಿವಾಸ್‌ ನಿರ್ದೇಶನ ಮಾಡಿದ್ದ 1998ರಲ್ಲಿ ತೆರೆ ಕಂಡಿದ್ದ ಶಾಂತಿ ಶಾಂತಿ ಶಾಂತಿ ಅನ್ನೋ ಸಿನಿಮಾದಲ್ಲಿ ಅನಂತ ಮೂರ್ತಿ ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ಅಬ್ಬಾಸ್‌, ಮಾಧವನ್‌ ಕೂಡ ನಟಿಸಿದ್ದರು. ತನ್ನದೇ ಆದ ವೆಬ್‌ಸೈಟ್‌ ಹೊಂದಿದ್ದ ಕನ್ನಡದ ಮೊದಲ ಸಿನಿಮಾ ಎನ್ನುವ ಕೀರ್ತಿಯೂ ಇದರದ್ದಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *