Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಸ್ತೆ ಗುಂಡಿಗೆ ಬಲಿಯಾದ ಬೆಂಗಳೂರು ಟೆಕ್ಕಿ: ಗುಂಡಿ ತಪ್ಪಿಸಲು ಹೋಗಿ ಲಾರಿ ಚಕ್ರಕ್ಕೆ ಸಿಲುಕಿ 26ರ ಯುವತಿ ಸ್ಥಳದಲ್ಲೇ ಸಾವು

Spread the love

ನೆಲಮಂಗಲ: ರಸ್ತೆ ಗುಂಡಿ (Pothole) ತಪ್ಪಿಸಲು ಹೋಗಿ ಟೆಕ್ಕಿಯೊಬ್ಬರು (Techie) ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ.

ಮೃತ ಟೆಕ್ಕಿಯನ್ನು ಪ್ರಿಯಾಂಕ (26) ಎಂದು ಗುರುತಿಸಲಾಗಿದೆ. ಯುವತಿ ಅಣ್ಣನ ಜೊತೆ ಬೈಕ್‍ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ (Accident) ನಡೆದಿದೆ

ರಸ್ತೆ ಕಾಮಗಾರಿಯಿಂದ ಈ ರಸ್ತೆ ಹದಗೆಟ್ಟಿದ್ದು, ಗುಂಡಿ ತಪ್ಪಿಸಲು ಪ್ರಿಯಾಂಕ ಸಹೋದರ ಯತ್ನಿಸಿದ್ದಾರೆ. ಈ ವೇಳೆ ಮುಂದೆ ಬಂದ ಲಾರಿ ಕೆಳಗೆ ಯುವತಿ ಬಿದ್ದಿದ್ದಾರೆ. ಈ ವೇಳೆ ಲಾರಿ ಯುವತಿಯ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *