Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾಂಪ್ರದಾಯಿಕ ಉಡುಪಿನಲ್ಲಿ ಹರ್ಡಲ್ಸ್ ಜಿಗಿದು ಚಿನ್ನ ಗೆದ್ದ 55 ವರ್ಷದ ಕ್ರೈಸ್ತ ಸನ್ಯಾಸಿನಿ

Spread the love

ವಯನಾಡು: 55 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹರ್ಡಲ್ಸ್ ಸ್ಪರ್ಧೆಯಲ್ಲಿ ಧಾರ್ಮಿಕ ಉಡುಪಿನಲ್ಲೇ ಬರಿಗಾಲಿನಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದ ನಂತರ ವೈರಲ್ ಆಗಿದ್ದಾರೆ.

ಮಾನಂತವಾಡಿಯ ದ್ವಾರಕಾ ಎಯುಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿಸ್ಟ‌ರ್ ಸಬೀನಾ ಅವರು ಸ್ಪರ್ಧೆಯಲ್ಲಿ ಗಮನಾರ್ಹವಾದ ಉತ್ಸಾಹ ಮತ್ತು ಶಕ್ತಿಯನ್ನು ಪ್ರದರ್ಶಿಸಿ ಭಾರೀ ಸುದ್ದಿಯಾಗಿದ್ದಾರೆ.

1990 ರ ದಶಕದಲ್ಲಿ ವಯನಾಡಿಗೆ ತೆರಳಿ ನೆಲೆಸಿದ್ದ ಕಾಸರಗೋಡು ಮೂಲದ ಸಿಸ್ಟರ್ ಸಬೀನಾ, ಮುಂದಿನ ಮಾರ್ಚ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿಗೂ ಮೊದಲು ನನ್ನ ಕೊನೆಯ ಸ್ಪರ್ಧೆ ಇದಾಗಿರಬಹುದು ಎಂದು ಹೇಳಿದ್ದಾರೆ.

ಓಟದ ವೇಳೆ ಸಿಸ್ಟ‌ರ್ ಸಬೀನಾ ಅವರು ಅಡೆತಡೆಗಳನ್ನು ಸಲೀಸಾಗಿ ಜಿಗಿಯುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾಧನೆಯನ್ನು ಶ್ಲಾಘಿಸಿ, ಇದನ್ನು “ಇದು ಇಚ್ಛಾಶಕ್ತಿಯ ಸಂಕೇತ’ ಎಂದು ಬಣ್ಣಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *