ಕನಸಿನ ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ: ಕಂತು ತೀರಿಸಲಾಗದೆ ಭಾರತೀಯ ಸೈನಿಕ ಆತ್ಮಹತ್ಯೆ

ಹುಣಸೂರು : ಮನೆ ಕಟ್ಟಲು ಮಾಡಿಕೊಂಡಿದ್ದ ಸಾಲದ ತೀರಿಸಲಾಗದೆ ಭಾರತೀಯ ಭೂಸೇನೆಯ ಸೈನಿಕರೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಕನಸಿನ ಮನೆ ನಿರ್ಮಾಣಕ್ಕೆ ಮೈತುಂಬಾ ಸಾಲ:
ಮೃತರನ್ನು ಎಂ. ಚಂದ್ರಶೇಖರ್ (35) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಹುಣಸೂರಿನ ಹೊಸ ಬಡಾವಣೆಯಲ್ಲಿ ಚಂದ್ರಶೇಖರ್ ಅವರು ಕನಸಿನ ಮನೆ ನಿರ್ಮಿಸಿದ್ದರು. ಈ ಯೋಜನೆಗಾಗಿ ಬ್ಯಾಂಕ್ ಮತ್ತು ಸ್ನೇಹಿತರಿಂದ ಸಾಲ ಪಡೆದಿದ್ದರು. ಆದರೆ, ಸಾಲದ ಕಂತುಗಳನ್ನು ತೀರಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಒತ್ತಡದಿಂದ ಮಾನಸಿಕವಾಗಿ ಕುಗ್ಗಿದ ಅವರು, ಸೋಮವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವನವನ್ನೇ ಕೊನೆಗೊಳಿಸಿದ್ದಾರೆ.
ಆರ್ಥಿಕ ಒತ್ತಡಕ್ಕೆ ಕೌನ್ಸೆಲಿಂಗ್ ಅಗತ್ಯ:
ಈ ಘಟನೆಯಿಂದ ಕುಟುಂಬಸ್ಥರು ಮತ್ತು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಸೈನಿಕರೊಬ್ಬರ ಈ ದುರಂತದ ಅಂತ್ಯವು ಸಾಲದ ಒತ್ತಡದ ಗಂಭೀರತೆಯನ್ನು ಎತ್ತಿ ತೋರಿಸಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆಯ ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆಯು ಆರ್ಥಿಕ ಸಂಕಷ್ಟದಿಂದ ಬಳಲುವವರಿಗೆ ಸೂಕ್ತ ಕೌನ್ಸೆಲಿಂಗ್ ಮತ್ತು ಬೆಂಬಲದ ಅಗತ್ಯವನ್ನು ಈ ಘಟನೆ ಎಚ್ಚರಿಸಿದೆ.