Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಸಿನಿಮಾ ಸ್ಟೈಲ್‌’ನಲ್ಲಿ ಅಪಹರಣಕಾರರನ್ನು ಬೆನ್ನಟ್ಟಿ ಬಾಲಕಿ ರಕ್ಷಿಸಿದ ಗ್ರಾಮಸ್ಥರು

Spread the love

ಮಧ್ಯಪ್ರದೇಶ : ಬೊಲೆರೋ ವಾಹನದಲ್ಲಿ ಬಂದು ರಸ್ತೆ ಬದಿ ನಿಂತಿದ್ದ ಬಾಲಕಿಯನ್ನು ಅಪಹರಿಸಿದ ಬೆನ್ನಲ್ಲೇ ಎಚ್ಚೆತ್ತ ಗ್ರಾಮಸ್ಥರು ಅಪಹರಣಕಾರರ ವಾಹನವನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಾಲಕಿಯನ್ನು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಧಾರ್ ‌ ನಲ್ಲಿ ಮಂಗಳವಾರ ( ಸೆ . 22 ) ನಡೆದಿದೆ .

ಘಟನೆಯ ದೃಶ್ಯ ಗಂಧ್ವಾನಿ ಬಸ್ ನಿಲ್ದಾಣ ಪ್ರದೇಶದಲ್ಲಿ ನಡೆದಿದ್ದು , ಘಟನೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಬಾಲಕಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಟಿಎಂ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಬಿಳಿ ಬಣ್ಣದ ಬೊಲೆರೋ ವಾಹನ ಬಂದು ನಿಂತಿದೆ ಈ ವೇಳೆ ಮೂವರು ಅಪರಿಚಿತರು ಎಟಿಎಂ ಬಳಿ ನಿಂತಿದ್ದ ಬಾಲಕಿಯನ್ನು ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ ಕೂರಿಸಿ ಅಪಹರಿಸಿದ್ದಾರೆ .

ಅಲರ್ಟ್ ಆದ ಸ್ಥಳೀಯರು :

ಇತ್ತ ಬಾಲಕಿಯನ್ನು ಅಪಹರಣ ಮಾಡುತ್ತಿದ್ದಂತೆ ಘಟನಾ ಸ್ಥಳದಲ್ಲಿದ್ದ ಕೆಲ ಜನರು ಗಲಿಬಿಲಿಗೊಂಡಿದ್ದಾರೆ ಆದರೆ ಇನ್ನೂ ಕೆಲ ಯುವಕರು ಧೈರ್ಯ ಮಾಡಿ ಅಪಹರಣ ಮಾಡಿದ ವಾಹನವನ್ನು ಬೈಕು , ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ,

20 ಕಿಲೋಮೀಟರ್ ಚೇಸ್ :

ಅಪಹರಣಕಾರರನ್ನು ಬೆನ್ನಟ್ಟಿದ್ದ ಯುವಕರ ತಂಡ ಸುಮಾರು 20 ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿದ್ದಾರೆ ಈ ವೇಳೆ ಅಪಹರಣಕಾರರ ವಾಹನ ರಸ್ತೆಯಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಈ ವೇಳೆ ವಾಹನದಲ್ಲಿದ್ದ ಅಪಹರಣಕಾರರು ಬಾಲಕಿಯನ್ನು ಬಿಟ್ಟು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ .

ಬಾಲಕಿಯ ರಕ್ಷಣೆ :

ಅಪಹರಣಕಾರರಿಂದ ಬಾಲಕಿಯನ್ನು ರಕ್ಷಣೆ ಮಾಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ , ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಪಹರಣಕ್ಕೊಳಗಾದ ಬಾಲಕಿಯಿಂದ ಮಾಹಿತಿಯನ್ನು ಪಡೆದಿದ್ದು ಅಪಹರಣಕಾರರ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ .


Spread the love
Share:

administrator

Leave a Reply

Your email address will not be published. Required fields are marked *