ಸಂಜಯ್ ದತ್‌ಗೆ 72 ಕೋಟಿ ಆಸ್ತಿ ವಹಿಸಿದ ಅಭಿಮಾನಿ! ಆದರೆ ಎಲ್ಲರನ್ನು ಆಶ್ಚರ್ಯಗೊಳಿಸಿತು ಸಂಜಯ್ ರವರ ನಿರ್ಧಾರ

ಮುಂಬೈನ 62 ವರ್ಷದ ಗೃಹಿಣಿ ನಿಷಾ ಪಾಟೀಲ್, ಬಾಲ್ಯದಿಂದಲೇ ನಟ ಸಂಜಯ್ ದತ್ ಅವರ ಭಾರೀ ಅಭಿಮಾನಿಯಾಗಿದ್ದರು. ಅವರು ಗಂಭೀರ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿ, ಬ್ಯಾಂಕಿಗೆ ವಿಶೇಷ ಸೂಚನೆ ನೀಡಿದ್ದು, 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಅವರಿಗೆ ವಹಿಸಲು ನಿರ್ಧರಿಸಿದ್ದರು.
ಈ ವಿಷಯವನ್ನು ಮುಂಬೈ ಪೊಲೀಸರು ಸಂಜಯ್ ದತ್‌ಗೆ ತಿಳಿಸಿದ್ದಾರೆ. ಆಕೆಯ ಭಕ್ತಿ ಮತ್ತು ಅಪಾರ ಗೌರವ ಕಂಡು ದತ್ ತೀವ್ರವಾಗಿ ಭಾವುಕರಾದರು. ಆದರೆ ಆ ಆಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ನಿರ್ಧರಿಸಿದರು.
“ನಿಷಾ ಪಾಟೀಲ್ ಅವರ ಭಕ್ತಿ ನನ್ನನ್ನು ಆಘಾತಗೊಳಿಸಿದೆ. ಆದರೆ, ನಾನು ಈ ಆಸ್ತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ಅಥವಾ ನಿಕಟ ಬಂಧುಗಳಿಗೆ ಇದನ್ನು ಹಸ್ತಾಂತರಿಸುವುದು ಸೂಕ್ತ,” ಎಂದು ಸಂಜಯ್ ದತ್ ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆ ಬಾಲಿವುಡ್‌ನಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಿಷಾ ಪಾಟೀಲ್ ಅವರ ಕುಟುಂಬ, ಅವರ ಈ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯದ ರೀತಿಯಲ್ಲಿ ಆಸ್ತಿ ಹಂಚಿಕೆಯಾಗಲಿ ಎಂದು ಆಶಿಸಿದ್ದಾರೆ.