ಸೋಷಿಯಲ್ ಮೀಡಿಯಾ ಕ್ರೇಜ್: ಬೆಂಕಿ ಹಚ್ಚಿಕೊಂಡು ರೀಲ್ಸ್ ಮಾಡಲು ಹೋಗಿ ಜೀವ ಉಳಿಸಿಕೊಳ್ಳಲು ಪ್ಯಾಂಟ್ ಬಿಚ್ಚಿ ಓಡಿದ ಯುವಕ!

ಇಂದಿನ ಯುವ ಸಮುದಾಯಕ್ಕೆ ಫೇಮಸ್ ಆಗಬೇಕು ಮತ್ತು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಮಹದಾಸೆಯನ್ನು ಹೊಂದಿರುತ್ತಾರೆ. ಕಡಿಮೆ ಸಮಯದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಇಂದಿನ ಯುವ ಸಮುದಾಯ ಸೋಶಿಯಲ್ ಮೀಡಿಯಾದ ಮೊರೆ ಹೋಗುತ್ತಾರೆ. ಎಲ್ಲರಿಗಿಂತ ಭಿನ್ನವಾಗಿ ವಿಡಿಯೋ ಮಾಡಲು ಪ್ರಯತ್ನಿಸುತ್ತಾರೆ. ಈ ವಿಡಿಯೋಗಳಿಂದ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇಂತಹ ವಿಡಿಯೋಗಳಿಂದ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅಪಾಯಕಾರಿ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಬೆಂಕಿ ವಿಡಿಯೋ ಮಾಡಲು ಹೋಗಿ ಪ್ಯಾಂಟ್ ಬಿಚ್ಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ.

ಪ್ಯಾಂಟ್ ಕಳಚಿ ಪ್ರಾಣಾಪಾಯದಿಂದ ಪಾರಾದ ಯುವಕ
ಯುವಕನೋರ್ವ ಹಾಡು ಹೇಳುತ್ತಾ ರೀಲ್ಸ್ ಮಾಡುತ್ತಿರುತ್ತಾನೆ. ಈ ವೇಳೆ ಯುವಕ ಪ್ಯಾಂಟ್ಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯನ್ನು ಹಚ್ಚಿಕೊಳ್ಳುವ ಮುನ್ನ ಯುವಕ ಮುಂಜಾಗ್ರತ ಕ್ರಮವಾಗಿ ಕೆಲವು ಕೆಮಿಕಲ್ ಬಳಸಿದಂತೆ ಕಾಣಿಸುತ್ತದೆ. ಆದ್ರೆ ಸಮಯ ಕಳೆದಂತೆ ಬೆಂಕಿಯ ತೀವ್ರತೆ ಯುವಕನ ದೇಹಕ್ಕೆ ತಾಗಿದೆ. ಇದರಿಂದ ಕೂಡಲೇ ಎಚ್ಚೆತ್ತ ಯುವಕ ಪ್ಯಾಂಟ್ ಕಳಚಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯುವಕನ ಅಪಾಯಕಾರಿ ರೀಲ್ಸ್ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @kirawontmiss ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 2.7 ಮಿಲಿಯನ್ಗೂ ಅಧಿಕ ವ್ಯೂವ್ ಬಂದಿವೆ. ಈ ವಿಡಿಯೋ ಪೋಸ್ಟ್ಗೆ ಇದೇ ರೀತಿಯ ಹಲವು ವಿಡಿಯೋಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.