Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಿಸ್ತೂಲ್‌ ಜೊತೆ ಆಟವಾಡುತ್ತಿದ್ದ 5 ವರ್ಷದ ಬಾಲಕ ಗುಂಡು ಹಾರಿಸಿಕೊಂಡು ದುರಂತ ಸಾವು

Spread the love

ಪೋಷಕರ ಅಜಾಗರೂಕತೆಯಿಂದ 5 ವರ್ಷದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಾಮಾನ್ಯವಾಗಿ ಚಾಕು ಚೂರಿಗಳನ್ನೇ ಮಕ್ಕಳ ಕೈಗೆ ಸಿಗದಂತೆ ಪೋಷಕರು ಮೇಲೆತ್ತಿಡುತ್ತಾರೆ. ಆದರೆ ಇಲ್ಲಿ 5 ವರ್ಷದ ಪುಟ್ಟ ಬಾಲಕನ ಕೈಗೆ ಲೋಡೆಡ್‌ ಗನ್ ಸಿಕ್ಕಿದ್ದು, ಇದರಲ್ಲಿ ಆಟವಾಡುತ್ತಿದ್ದ ಬಾಲಕ ಅಚಾನಕ್ ಆಗಿ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ರಾಜಸ್ಥಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಯಲ್ಲಿ ಗುಂಡು ತುಂಬಿದ್ದ ಪಿಸ್ತೂಲ್‌ನಲ್ಲಿ ಈ ಪುಟ್ಟ ಬಾಲಕ ಆಟವಾಡುತ್ತಿದ್ದಾಗ ದುರಂತ ನಡೆದಿದೆ. ಈ ಬಾಲಕ ಆಕಸ್ಮಿಕವಾಗಿ ಪಿಸ್ತೂಲ್‌ನ ಟ್ರಿಗರ್ ಒತ್ತಿದ್ದು, ಗುಂಡು ಬಂದು ಬಾಲಕನ ತಲೆಗೆ ಬಡಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆಕಸ್ಮಿಕವಾಗಿ ಟ್ರಿಗರ್‌ ಎಳೆದ ಬಾಲಕ: ಮನೆಯಲ್ಲಿ ಪೋಷಕರು ಇಲ್ಲದ ವೇಳೆ ದುರಂತ

ಪ್ರಾಥಮಿಕ ವರದಿಗಳ ಪ್ರಕಾರ 5 ವರ್ಷದ ದೇವಾಂಶು ಮೃತ ಬಾಲಕ. ಈತ ತನ್ನ ಪೋಷಕರ ಜೊತೆ ವಿರಾಟ್‌ನಗರ ಪ್ರದೇಶದ ಚಿತೌಲಿ ಕಾ ಬರ್ದಾ ಎಂಬ ಗ್ರಾಮದಲ್ಲಿ ವಾಸ ಮಾಡ್ತಿದ್ದ. ಘಟನೆ ನಡೆದ ವೇಳೆ ಬಾಲಕ ಒಬ್ಬನೇ ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ. ಆಟವಾಡುತ್ತಿದ್ದ ಈತನ ಕೈಗೆ ಅಲ್ಲಿ ಬಾಕ್ಸ್‌ನಲ್ಲಿ ಇರಿಸಿದ್ದ ಕಂಟ್ರಿ ಪಿಸ್ತೂಲ್ ಸಿಕ್ಕಿದೆ. ಈತ ತಿಳಿಯದೇ ಪಿಸ್ತೂಲ್‌ನ ಟ್ರಿಗರ್ ಎಳೆದಿದ್ದು, ಗುಂಡು ಸೀದಾ ಬಂದು ಈತನ ತಲೆಗೆ ಬಡಿದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ದುರಂತ ಸಂಭವಿಸಿದಾಗ ಈತನ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

ಮನೆಯಲ್ಲಿ ಪಿಸ್ತೂಲ್ ಸಿಕ್ಕಿದ್ದು ಹೇಗೆ?

ಇತ್ತ ನೆರೆಮನೆಯವರಿಗೆ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿ ಬಂದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರು ಬಾಲಕನ ಪೋಷಕರು ಹಾಗೂ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಕರೆತರುತ್ತಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಮೃತ ಬಾಲಕ ದೇವಾಂಶುವಿನ ತಂದೆ ಮುಕೇಶ್ ಡಿಫೆನ್ಸ್ ಅಕಾಡೆಮಿಯನ್ನು ನಡೆಸುತ್ತಿದ್ದರು. ಆದರೆ ವರ್ಷದ ಹಿಂದೆ ಅವರು ಈ ಅಕಾಡೆಮಿಯನ್ನು ಮುಚ್ಚಿದ್ದು, ತಮ್ಮ ಪತ್ನಿಯ ಜೊತೆ ಸೇರಿ ಹಾಡುಗಾರಿಕೆ ನಡೆಸುತ್ತಿದ್ದರು. ಅವರೊಬ್ಬ ಜಾನಪದ ಕಲಾವಿದರಾಗಿದ್ದು, ದೇವಾಂಶು ಅವರ ಏಕೈಕ ಮಗನಾಗಿದ್ದ. ಆದರೆ ಈಗ ಇರುವ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Spread the love
Share:

administrator

Leave a Reply

Your email address will not be published. Required fields are marked *