Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈಲ್ವೆ ಹಳಿ ಮೇಲೆ ಮಲಗಿ ಅಪಾಯಕಾರಿ ರೀಲ್ಸ್ ಮಾಡಿದ ಯುವಕ: ವಿಡಿಯೋ ವೈರಲ್

Spread the love

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್‌ ಮಾಡಿ ನಾನಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇಲ್ಲೊಬ್ಬ ಯುವಕನದ್ದು ಇದೆ ಕಥೆ. ಹೌದು ಯುವಕನೊಬ್ಬ ರೀಲ್ಸ್ ಕ್ರೇಜ್‌ಗೆ ಬಿದ್ದು ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿ (railway track) ಮೇಲೆ ಮಲಗಿ ರೀಲ್ಸ್ ಮಾಡಿದ್ದಾನೆ. ಈತನ ಆಯಸ್ಸು ಗಟ್ಟಿ ಇದೆ ಕಾಣಿಸುತ್ತೆ, ಪ್ರಾಣಾಪಯದಿಂದ ಪಾರಾಗಿದ್ದಾನೆ. ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

@nidhiambedkar ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುತ್ತಿದ್ದಾರೆ..! ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೀಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ರೈಲ್ವೆ ಹಳಿಗಳ ಮೇಲೆ ರೀಲ್ಸ್ ಮಾಡಲು ಮುಂದಾಗಿರುವುದನ್ನು ನೋಡಬಹುದು. ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿಗಳ ಮೇಲೆ ಮಲಗಿದ್ದು, ರೈಲು ಆತನ ಮೇಲೆ ಹಾದುಹೋಗಿದೆ. ಆ ಬಳಿಕ ಎದ್ದು ನಿಂತು ಏನೋ ಸಾಧಿಸಿದೆ ಎನ್ನುವಂತೆ ಜೋರಾಗಿ ಕಿರುಚುವುದನ್ನು ನೋಡಬಹುದು.

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು, ಈ ವಿಡಿಯೋ ಯಾವಾಗ ಪೋಸ್ಟ್ ಮಾಡಲಾಗಿದೆ ಹಾಗೂ ಎಲ್ಲಿ ನಡೆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿಯ ಹುಚ್ಚಾಟಗಳಿಗೆ ಯಾವಾಗ ಕಡಿವಾಣ ಬೀಳುತ್ತೆ ಎಂದು ಕೇಳಿದ್ದಾರೆ. ಮತ್ತೊಬ್ಬರು, ರೀಲ್ಸ್ ಹುಚ್ಚು ಪ್ರಾಣ ಕಳೆದುಕೊಂಡು ಹೋಗುವಷ್ಟರ ಮಟ್ಟಿಗೆ ಹೋಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *