Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಿಳೆಗೆ ನೈಜಿರಿಯಾ ವ್ಯಕ್ತಿಯಿಂದ ಮದುವೆಯಾಗುದಾಗಿ 5 ಲಕ್ಷ ರೂ ವಂಚನೆ

Spread the love

ಬಾಗಲಕೋಟೆ :- ಬಾಗಲಕೋಟೆ ಮಹಿಳೆಗೆ ನೈಜಿರಿಯಾ ವ್ಯಕ್ತಿ‌ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿದ್ದ ವ್ಯಕ್ತಿಯು, ಮದುವೆ ಮಾಡಿಕೊಳ್ಳುವುದಾಗಿ ಲಕ್ಷಾಂತರ ರೂ. ವಂಚನೆ ಎಸಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಬಾಗಲಕೋಟೆ ಸಿಇಎನ್ ಪೊಲೀಸರು ನೈಜಿರಿಯಾ ಮೂಲದ ವ್ಯಕ್ತಿ‌ಯನ್ನು ಅರೆಸ್ಟ್ ಮಾಡಿದ್ದಾರೆ.

ಅಲಿವರ್ ವುಗುವೊ ಒಕಿಚಿಕು ಎಂಬ ವ್ಯಕ್ತಿ ಬಂಧಿತ ಆರೋಪಿ. ಈ ಬಂಧಿತನಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್‌, ಅಮೆರಿಕ ಡಾಲರ್ ಇರುವ ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ. ಅಲಿವರ್ ಇಳಕಲ್ ಮೂಲದ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ 5.50 ಲಕ್ಷ ರೂ. ಪಡೆದು ಮೋಸಮಾಡಿದ್ದ. ಹೀಗಾಗಿ ಮೋಸಹೋದ ಮಹಿಳೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಗಲಕೋಟೆ ಸಿಇಎನ್ ಪೊಲೀಸರು, ಈತನ ಜಾಡು ಹಿಡಿದು ಮುಂಬೈನಲ್ಲಿ ನೆಲೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *