Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುಟಿನ್ ಭೇಟಿ ಬಳಿಕ ಚೀನಾ ಸಭೆಯ ಸ್ಥಳ ಸ್ಯಾನಿಟೈಸ್ ಮಾಡಿದ ಕಿಮ್ ಜಾಂಗ್ ಉನ್ ಸಿಬ್ಬಂದಿ: ವಿಡಿಯೋ ವೈರಲ್

Spread the love

ಬೀಜಿಂಗ್ : ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿಯಾಗಿದ್ದಾರೆ. ಈ ವೇಳೆ ನಡೆದಿರುವ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರು ನಾಯಕರ ನಡುವಿನ ಸಭೆಯ ಸ್ಥಳ ರಾಜತಾಂತ್ರಿಕ ಶಿಷ್ಟಾಚಾರಕ್ಕಿಂತ ಹೆಚ್ಚಾಗಿ ಒಂದು ಅಪರಾಧ ದೃಶ್ಯದಂತೆ ಕಂಡುಬಂತು.

ಸಭೆ ಬಳಿಕ ಕಿಮ್ ಜಾಂಗ್ ಉನ್ ಅವರು ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ, ಅವರು ಮುಟ್ಟಿದ ಪ್ರತಿಯೊಂದು ವಸ್ತುವನ್ನು ಉತ್ತರ ಕೊರಿಯಾದ ಸಿಬ್ಬಂದಿ ತರಾತುರಿಯಲ್ಲಿ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋ ಈಗ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

ಎರಡನೇ ಮಹಾಯುದ್ಧದ ವಿಜಯೋತ್ಸವದ ಪ್ರಯುಕ್ತ ಬೀಜಿಂಗ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ದೇಶದ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ಬಳಿಕ ಉತ್ತರ ಕೊರಿಯಾ ಮತ್ತು ರಷ್ಯಾದ ನಾಯಕರು ಮಾತುಕತೆ ನಡೆಸಿದ್ದರು. ಆ ಸಭೆ ಬಳಿಕ ಅಸಾಮಾನ್ಯ ದೃಶ್ಯ ಕಂಡುಬಂದಿದ್ದು, ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಸಭೆ ಮುಗಿದ ತಕ್ಷಣ ಕಿಮ್ ಅವರ ಇಬ್ಬರು ಸಹಾಯಕರು ತರಾತುರಿಯಲ್ಲಿ ಆ ಸ್ಥಳವನ್ನು ಸ್ವಚ್ಛಗೊಳಿಸಿದ್ದು ಕಂಡುಬಂತು. ಓರ್ವ ಸಿಬ್ಬಂದಿ ಕಿಮ್ ಕುಳಿತಿದ್ದ ಕುರ್ಚಿಯ ಹಿಂಭಾಗವನ್ನು ಎಚ್ಚರಿಕೆಯಿಂದ ಪಾಲಿಶ್ ಮಾಡಿದರೆ, ಇನ್ನೊಬ್ಬರು ಅವರು ಕುಡಿದ ನೀರಿನ ಗ್ಲಾಸ್ ಅನ್ನು ಒಬ್ಬ ಪೊಲೀಸ್‌ ತನಿಖಾಧಿಕಾರಿಯಂತೆ ಟ್ರೇನಲ್ಲಿ ಹೊತ್ತೊಯ್ದರು. ಕುರ್ಚಿಯ ಎಲ್ಲ ಭಾಗಗಳು, ಕಿಮ್‌ ಜಾಂಗ್‌ ಉನ್‌ ಓಡಾಡಿದ ಹೊದಿಕೆ, ಪಕ್ಕದ ಟೇಬಲ್‌ ಅನ್ನು ಕೂಡ ಒರೆಸಿ ಸ್ವಚ್ಛಗೊಳಿಸಿದರು. ಈ ಮೂಲಕ ಉತ್ತರ ಕೊರಿಯಾದ ನಾಯಕನ ಉಪಸ್ಥಿತಿಯ ಯಾವುದೇ ಕುರುಹು ಇಲ್ಲದಂತೆ ಒರೆಸಲಾಯಿತು.

ಪುಟಿನ್‌ ಹಾಗೂ ಕಿಮ್‌ ಜಾಂಗ್‌ ಉನ್‌ ಮಾತುಕತೆ ಬಳಿಕ ಉತ್ತರ ಕೊರಿಯಾ ಮುಖ್ಯಸ್ಥರ ಜೊತೆಗಿದ್ದ ಸಿಬ್ಬಂದಿ ಕಿಮ್ ಅವರ ಉಪಸ್ಥಿತಿಯ ಎಲ್ಲಾ ಕುರುಹುಗಳನ್ನು ಎಚ್ಚರಿಕೆಯಿಂದ ನಾಶಪಡಿಸಿದರು ಎಂದು ರಷ್ಯಾದ ಪತ್ರಕರ್ತ ಅಲೆಕ್ಸಾಂಡರ್ ಯುನಾಶೇವ್ ತಮ್ಮ ಯುನಾಶೇವ್ ಲೈವ್ ಚಾನೆಲ್‌ನಲ್ಲಿ ವರದಿ ಮಾಡಿದ್ದಾರೆ. ಅವರು ಕಿಮ್‌ ಕುಡಿದ ಗ್ಲಾಸ್ ಅನ್ನು ತೆಗೆದುಕೊಂಡು ಹೋದರು, ಕುರ್ಚಿಯ ಹೊದಿಕೆ ಮತ್ತು ಕೊರಿಯಾದ ನಾಯಕ ಮುಟ್ಟಿದ ಪೀಠೋಪಕರಣಗಳ ಭಾಗಗಳನ್ನು ಒರೆಸಿದರು ಎಂದು ಅವರು ವಿವರಿಸಿದ್ದಾರೆ. ಉತ್ತರ ಕೊರಿಯಾದ ಈ ರೀತಿಯ ಸ್ವಚ್ಛತಾ ಕಾರ್ಯಕ್ಕೆ ನಿಖರವಾದ ಕಾರಣ ಇನ್ನೂ ಬಹಿರಂಗಗೊಂಡಿಲ್ಲ. ಇದು ರಷ್ಯಾದ ಪ್ರಬಲ ಭದ್ರತಾ ಸೇವೆಗಳ ವಿರುದ್ಧದ ಮುನ್ನೆಚ್ಚರಿಕೆ ಕ್ರಮ ಎಂದು ಕೆಲವರು ಊಹಿಸಿದರೆ, ಚೀನಾದ ಕಣ್ಗಾವಲು ವ್ಯವಸ್ಥೆಯ ಬಗ್ಗೆ ಇರುವ ಆತಂಕವೂ ಕಾರಣವಿರಬಹುದು ಎಂದು ಇತರರು ಹೇಳಿದ್ದಾರೆ. ವಿದೇಶಗಳಲ್ಲಿ ತಮ್ಮ ಡಿಎನ್‌ಎ ಯಾರಿಗೂ ಸಿಗಬಾರದು ಎಂದು ಈ ರೀತಿ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *