Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ರಿಟಿಷ್ ಸೂಪರ್‌ಕಾರ್‌ ಕಂಪನಿಯ ಲೋಗೋ ಗಣೇಶ!

Spread the love

ಬೆಂಗಳೂರು: ಗಣೇಶ, ಗಣಪತಿ, ವಿಘ್ನ ನಿವಾರಕ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಪಾರ್ವತಿ ಪುತ್ರ, ಭಾರತೀಯರಿಗೆ ಅಚ್ಚುಮೆಚ್ಚಿನ ದೇವರು. ಮೊದಲ ಪೂಜಿಪನಾದ ಈ ಗಣೇಶನನ್ನು ಬ್ರಿಟನ್‌ನ ಸೂಪರ್‌ಕಾರ್‌ ಕಂಪನಿಯೊಂದು ಲೋಗೊ ಆಗಿ ಬಳಸಿಕೊಂಡಿದೆ.

ಬ್ರಿಟನ್‌ನ ಜನಪ್ರಿಯ ಸೂಪರ್‌ಕಾರು ಮತ್ತು ಮೊಟೊಸ್ಪೋರ್ಟ್‌ ಕಾರುಗಳಿಗೆ ಬ್ರ್ಯಾಂಡ್‌ ಆಗಿರುವ ‘ಲ್ಯಾನ್ಜೆಂಟ್’ (Lanzante) ಕಂಪನಿ ಚತುರ್ಭುಜ ಗಣೇಶನನ್ನು ತನ್ನ ಲೋಗೊವನ್ನಾಗಿ ಬಳಸಿದೆ.

ಕಾರು ಕಂಪನಿಯ ಸ್ಥಾಪಕ ಪೌಲ್‌ ಲ್ಯಾನ್ಜೆಂಟ್. ಇವರಿಗೆ ಗಣೇಶ ಮೂರ್ತಿಯನ್ನು ಲೋಗೊವಾಗಿ ಬಳಸುವ ಕಲ್ಪನೆಯನ್ನು ಬ್ರಿಟನ್‌ನ ರಾಕ್ ಸಂಗೀತ ತಂಡ ‘ದಿ ಬೀಟಲ್ಸ್‌’ನ ಗಾಯಕ ಜಾರ್ಜ್ ಹ್ಯಾರಿಸನ್ ಸೂಚಿಸಿದ್ದರು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ.

ಗಣೇಶನನ್ನು ಅದೃಷ್ಟದ ಸಂಕೇತ. ಸಂಕಷ್ಟ, ಅಡೆತಡೆಗಳನ್ನು ನಿವಾರಿಸುತ್ತಾನೆ. ಸೂಪರ್‌ ಕಾರು ತಯಾರಿಕೆಯಲ್ಲಿನ ಎಲ್ಲಾ ಸವಾಲುಗಳನ್ನು ನಿವಾರಿಸಿದ್ದರಿಂದ ಈ ಕಾರಿಗೆ ಈ ಲೋಗೊವೇ ಸೂಕ್ತ ಎಂದು ಹ್ಯಾರಿಸ್‌ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

1970ರಲ್ಲಿ ಆರಂಭವಾದ ಈ ಬ್ರಿಟಿಷ್‌ ಕಾರು ಕಂಪನಿಯು, Lotus 2-Eleven, McLaren P1 GTR-LM, McLaren P1 GT ಸೇರಿದಂತೆ ಹಲವು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *