ನೆಲಮಂಗಲದಲ್ಲಿ ಪ್ರತ್ಯೇಕ ಘಟನೆಗಳು: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ, RTO ಅಧಿಕಾರಿಯಿಂದ ಲೈಂಗಿಕ ಕಿರುಕುಳ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ ನೆಲಮಂಗಲದ (Nelamangala) ಮಾದನಾಯಕನಹಳ್ಳಿಯಲ್ಲಿ (Madanayakanahalli) 16 ವರ್ಷದ ಬಾಲಕಿಯೊಬ್ಬಳು ನೇಣಿಗೆ ಶರಣಾಗಿರುವ (Crime) ಘಟನೆ ನಡೆದಿದ್ದು, ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ

ಮೃತ ಯುವತಿಯನ್ನು ಕುಸುಮ (16) ಎಂದು ಗುರುತಿಸಲಾಗಿದೆ.
ರಾಮು ಹಾಗೂ ಶೋಭಾ ದಂಪತಿಯ ಮಗಳು ಕುಸುಮ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅದರೆ ನಿನ್ನೆ ಸಂಜೆ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಬಾಲಕಿ ಏಷ್ಟು ಹೊತ್ತಾದರೂ ಬಂದಿರಲಿಲ್ಲ.
ಇದರಿಂದ ಆತಂಕಗೊಂಡ ಪೋಷಕರು 6.30 ರ ವೇಳೆಗೆ ಬಾಗಿಲು ಓಪನ್ ಮಾಡಿ ನೋಡಿದಾಗ ಕುಸುಮ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತನಿಖೆಯ ಬಳಿಕವಷ್ಟೆ ಬಯಲಾಗಬೇಕಿದೆ.
ಪ್ರತ್ಯೇಕ ಘಟನೆ. ನೆಲಮಂಗಲದ ಆರ್ ಟಿ ಒ ಕಚೇರಿಯಲ್ಲಿ ಕ್ರೂರ ಘಟನೆಯೊಂದು ನಡೆದಿದ್ದು, ಆರ್ ಟಿ ಒ ಕಚೇರಿಯ ಮಹಿಳಾ ಸಹೋದ್ಯೋಗಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ರಾಜ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಯನ್ನು ಮೇ 30 ರಂದು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ರಸ್ತೆಯಲ್ಲಿರುವ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಾದೇಶಿಕ ಸಾರಿಗೆ ಹೆಚ್ಚುವರಿ ಪ್ರಭಾರ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಆದರೆ ಇದೀಗ ಆರ್ ಟಿಒ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಸಹೋದ್ಯೋಗಿ ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಸದಾ ಪೀಡಿಸುತ್ತಿದ್ದ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳಾ ಅಧಿಕಾರಿ ನೀಡಿದ ದೂರಿನಲ್ಲಿ ರಾಜ್ ಕುಮಾರ್ ತಮ್ಮ ಕೊಠಡಿಗೆ ನನ್ನನ್ನು ಕರೆಸಿಕೊಂಡು ಬೆದರಿಕೆ ಹಾಕಿ ಬಲವಂತವಾಗಿ ನಾನು ಹಾಕಿಕೊಂಡಿದ್ದ ಜರ್ಕಿನ್ ಬಿಚ್ಚಿಸಿ ಕೆಟ್ಟದಾಗಿ ದಿಟ್ಟಿಸಿ ನೋಡುತ್ತಿದ್ದರು. ಅಷ್ಟೇ ಅಲ್ಲದೆ ಸಮವಸ್ತ್ರದಲ್ಲಿದ್ದಾಗ ಅಸಭ್ಯವಾಗಿ ವರ್ತಿಸುತ್ತಿದ್ದರು.
ಅಷ್ಟೇ ಅಲ್ಲದೆ ರಾಜ್ ಕುಮಾರ್ ಅವರ ಈ ವರ್ತನೆಯಿಂದ ಬೇಸತ್ತು ಕೆಲಸವನ್ನು ಬಿಡಲು ಯೋಚಿಸಿದ್ದೆ ಆದರೆ ಪತಿ ನನಗೆ ಧೈರ್ಯ ತುಂಬಿ ದಿನನಿತ್ಯ ಜರ್ಕಿನ್ ಹಾಕಿಕೊಂಡು ಹೋಗುವಂತೆ ತಿಳಿಸಿದ್ದರು. ಆದರೂ ಕೂಡ ಅವರ ವರ್ತನೆ ಸರಿಯಾಗಿರಲಿಲ್ಲ. ಹಾಗೆ ನನಗೆ ಕೆಲಸದ ಮೇಲಿದ್ದರು ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ಇದೀಗ ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಾಜ್ ಕುಮಾರ್ ಎಸ್ಕೇಪ್ ಆಗಿದ್ದು, ಇದೀಗ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.