Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕಾದ ಟ್ರಂಪ್ ಆಪ್ತ ಭಾರತದ ರಾಯಭಾರಿಯಾಗಿ ಆಯ್ಕೆ

Spread the love

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತ ರಾಜಕೀಯ ಸಹಾಯಕ ಮತ್ತು ಶ್ವೇತಭವನದ ಪ್ರಮುಖ ಅಧಿಕಾರಿಯಾದ ಸೆರ್ಗಿಯೊ ಗೋರ್ (Sergio Gor) ಅವರನ್ನು ಅಮೆರಿಕಾದ ಭಾರತೀಯ ರಾಯಭಾರಿಯಾಗಿ (Ambassador) ಶುಕ್ರವಾರ ನೇಮಕ ಮಾಡಲಾಗಿದೆ.

ಭಾರತದೊಂದಿಗೆ ಅಮೆರಿಕ ಸಂಬಂಧ ಸೂಕ್ಷ್ಮ ಹಂತದಲ್ಲಿರುವಾಗ ಟ್ರಂಪ್ ತಮ್ಮ ಅತ್ಯಂತ ನಂಬಿಕಸ್ಥ ಅಧಿಕಾರಿಯನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಗೋರ್ ಅವರನ್ನು ಭಾರತ ರಾಯಭಾರಿ ಮಾತ್ರವಲ್ಲದೇ ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿಯೂ ಟ್ರಂಪ್ ನೇಮಿಸಿದ್ದಾರೆ.

ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಾನು ಸಂಪೂರ್ಣವಾಗಿ ವಿಶ್ವಾಸ ಇಡಬಹುದಾದ ವ್ಯಕ್ತಿ ಇರುವುದು ಮುಖ್ಯ. ಆದ್ದರಿಂದ ಸೆರ್ಗಿಯೊ ಗೋರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸುತ್ತಿದ್ದು, ಗೋರ್ ಅವರನ್ನು ಭಾರತ ಗಣರಾಜ್ಯಕ್ಕೆ ನಮ್ಮ ಮುಂದಿನ ಅಮೆರಿಕದ ರಾಯಭಾರಿಯಾಗಿ ಬಡ್ತಿ ನೀಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರನ್ನು ನೇಮಕ ಮಾಡಲಾಗಿದೆ. ನನ್ನ ಕಾರ್ಯಸೂಚಿಯನ್ನು ಪೂರೈಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಮಗೆ ಸಹಾಯ ಮಾಡಲು ನಾನು ಸಂಪೂರ್ಣವಾಗಿ ನಂಬಬಹುದಾದ ವ್ಯಕ್ತಿಯನ್ನು ಹೊಂದಿರುವುದು ಮುಖ್ಯ. ಸೆರ್ಗಿಯೊ ಅದ್ಭುತ ರಾಯಭಾರಿಯಾಗುತ್ತಾರೆ. ಅಭಿನಂದನೆಗಳು ಸೆರ್ಗಿಯೊ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಕುರಿತು ಸೆರ್ಗಿಯೊ ಗೋರ್ ಪ್ರತಿಕ್ರಿಯಿಸಿ, ಭಾರತಕ್ಕೆ ಮುಂದಿನ ಅಮೆರಿಕಾ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡುವಲ್ಲಿ ಟ್ರಂಪ್ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಅಮೆರಿಕವನ್ನು ಪ್ರತಿನಿಧಿಸುವುದು ನನ್ನ ಜೀವನದ ಗೌರವವಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *