Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿಮಗೆ ವಯಸ್ಸಾಗಿದೆ, ನಿವೃತ್ತಿ ತೆಗೆದುಕೊಳ್ಳಿ ಎಂದ ನೆಟ್ಟಿಗನಿಗೆ ಶಾರುಖ್ ಖಾನ್ ತಿರುಗೇಟು

Spread the love

ಶಾರುಖ್ ಖಾನ್ ತಮ್ಮ ನೇರ ನುಡಿ ಮತ್ತು ಹಾಸ್ಯಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಆಗಾಗ್ಗೆ X ನಲ್ಲಿ ಅಭಿಮಾನಿಗಳೊಂದಿಗೆ #AskSRK ಸೆಷನ್ ನಡೆಸುತ್ತಾರೆ. ಇದರಲ್ಲಿ ಅವರು ಜನರ ಕೇಳುವ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ನೀಡುತ್ತಾರೆ.

ಆಗಸ್ಟ್ 16 ರಂದು, ಶಾರುಖ್ ಇದೇ ರೀತಿಯ ಚಾಟ್ ಸೆಷನ್ ನಡೆಸಿದರು. ಇದರಲ್ಲಿ ಒಬ್ಬ ಬಳಕೆದಾರರು ಶಾರುಖ್ ಅವರನ್ನು ನಿವೃತ್ತಿ ಹೊಂದುವಂತೆ ಸಲಹೆ ನೀಡಿದರು. ಇದಕ್ಕೆ ಕಿಂಗ್ ಖಾನ್ ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದರು.

ಶಾರುಖ್ ಅವರ ಭುಜ ಈಗ ಹೇಗಿದೆ ಎಂದು ಬಳಕೆದಾರರೊಬ್ಬರು ಕೇಳಿದಾಗ, ‘ನಾನು ಸ್ಟಾರ್‌ ಡಮ್‌ ಹೊರೆಯನ್ನು ಚೆನ್ನಾಗಿ ಹೊರುತ್ತಿದ್ದೇನೆ… ಹ ಹ. ಮೈ ಫ್ರೆಂಡ್‌ ಅದು ಸುಧಾರಿಸುತ್ತಿದೆ. ಕೇಳಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂದು ಹೇಳಿದ್ದರು.

ಇನ್ನೊಬ್ಬ ಬಳಕೆದಾರರು ಶಾರುಖ್‌ ಖಾನ್‌ಗೆ ನಿವೃತ್ತಿ ಹೊಂದುವಂತೆ ಸಲಹೆ ನೀಡಿದಾಗ ಖಾಋವಾದ ಉತ್ತರವನ್ನು ನೀಡಿದರು. ‘ಈಗ ನಿಮಗೆ ವಯಸ್ಸಾಗಿದೆ ನಿವೃತ್ತಿ ತೆಗೆದುಕೊಳ್ಳಿ, ಇತರ ಮಕ್ಕಳು ಮುಂದೆ ಬರಲಿ’ ಎಂದು ನೆಟ್ಟಿಗರೊಬ್ಬರು ಬರೆದಿದ್ದರು. ಇದಕ್ಕೆ ಶಾರುಖ್ ಖಾನ್‌, ‘ಭಾಯ್‌ ನಿಮ್ಮ ಚೈಲ್ಡಿಶ್‌ ಪ್ರಶ್ನೆಗಳು ಮುಗಿದ ನಂತರ… ನಂತರ ಏನಾದರೂ ಒಳ್ಳೆಯದನ್ನು ಕೇಳಿ. ಅಲ್ಲಿಯವರೆಗೆ ದಯವಿಟ್ಟು ತಾತ್ಕಾಲಿಕ ನಿವೃತ್ತಿಯಲ್ಲಿರಿ’ ಎಂದು ಉತ್ತರಿಸಿದ್ದಾರೆ.

ಅದೇ ಸಮಯದಲ್ಲಿ ಅಭಿಮಾನಿಯೊಬ್ಬರು ಶಾರುಖ್ ಅವರನ್ನು ಅವರ ಮಗ ಆರ್ಯನ್ ಖಾನ್ ಅವರ ಸರಣಿ ರಿಲೀಸ್‌ ಬಗ್ಗೆ ಕೇಳಿದರು. ‘ತುಂಬಾ ಜನರು ಈ ಬಗ್ಗೆ ಕೇಳುತ್ತಿದ್ದಾರೆ. ಆದ್ದರಿಂದ ನೆಟ್‌ಫ್ಲಿಕ್ಸ್‌ಗೆ ಹೇಳಬೇಕು. ಮಗ ವೆಬ್‌ ಸಿರೀಸ್‌ ಮಾಡುತ್ತಿದ್ದಾನೆ, ತಂದೆ ಕಾಯುತ್ತಿದ್ದಾನೆ.’ ಎಂದು ಉತ್ತರಿಸಿದ್ದಾರೆ. ಶಾರುಖ್ ನೆಟ್‌ಫ್ಲಿಕ್ಸ್‌ಗೆ ಟ್ಯಾಗ್ ಮಾಡಿ, ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಆಗ ನೆಟ್‌ಫ್ಲಿಕ್ಸ್, ‘ಮಗನ ಟೀಸರ್ ಪೋಸ್ಟ್ ಮಾಡುವ ಮೊದಲು ತಂದೆಯ ಅನುಮತಿ ಬೇಕಿತ್ತು. ಫಸ್ಟ್ ಲುಕ್ ನಾಳೆ ಬರಲಿದೆ’ ಎಂದು ಉತ್ತರಿಸಿತು.

ಇದರ ನಂತರ ಶಾರುಖ್ ನೆಟ್‌ಫ್ಲಿಕ್ಸ್‌ಗೆ, ‘ಹೌದು, ಹಾಗಾದರೆ ಟೀಸರ್‌ನ ಸಮಯ ಏನು? ದಯವಿಟ್ಟು ಹೇಳಿ ಏಕೆಂದರೆ ಆರ್ಯನ್ ನನಗೆ ಏನನ್ನೂ ಹೇಳುವುದಿಲ್ಲ. ಅವನಿಗೆ ನಿಮ್ಮೊಂದಿಗೆ ಹಳೆಯ ಸಂಬಂಧವಿದೆ. ಆದ್ದರಿಂದ ನನಗೆ ಮತ್ತು ಎಲ್ಲರಿಗೂ ಹೇಳಿ.’ ಎಂದರು. ಇದಕ್ಕೆ ನೆಟ್‌ಫ್ಲಿಕ್ಸ್ ಬರೆದಿತು, ‘ನಾನು ಇಲ್ಲಿದ್ದೇನೆ ಸರ್, ಟೀಸರ್ ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಗೆ ಬರುತ್ತದೆ.’ ಎಂದು ಹೇಳಿತು.

ಆ ಪ್ರಕಾರ ಶಾರುಖ್‌ ಖಾನ್‌ ಪುತ್ರ ನ ವೆಬ್‌ ಸಿರೀಸ್‌ ಟೀಸರ್‌ ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಗೆ ರಿಲೀಸ್‌ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *