Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಪ್ರಯಾಣಿಕರಿಗೆ ಉಚಿತ ಬಸ್ ಸಂಪರ್ಕ

Spread the love

ಬೆಂಗಳೂರು: ಐಟಿ ಹಬ್​ ಎಲೆಕ್ಟ್ರಾನಿಕ್​ ಸಿಟಿಗೆ ಸಂಪರ್ಕಿಸುವ ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಹಳದಿ ಮೆಟ್ರೋ ಈಗಾಗಲೇ ಕಾರ್ಯಾರಂಭ ಮಾಡಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಇತ್ತೀಚೆಗೆ ಬಿಎಂಟಿಸಿ ಬಸ್​​ಗಳನ್ನು ಆರಂಭಿಸಿತ್ತು. ಇದೀಗ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಉಚಿತ​ ಫೀಡರ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆ ಮೂಲಕ ಈ ಮಾರ್ಗದಲ್ಲಿ ಆಫೀಸ್​ಗಳಿಗೆ ಹೋಗುವವರಿಗೆ ಸಹಕಾರಿಯಾಗಲಿದೆ.

ಉಚಿತ ಬಸ್​ ಸೇವೆ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಕುರಿತಾಗಿ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

ಈ ಉಚಿತ​ ಫೀಡರ್ ಬಸ್ ಸೇವೆಯೂ ಎಲೆಕ್ಟ್ರಾನಿಕ್​ ಸಿಟಿ ಮೆಟ್ರೋ ನಿಲ್ದಾಣ (EC1) ಮತ್ತು ಇನ್ಫೋಸಿಸ್, ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ (EC2) ದಿಂದ ಎಲೆಕ್ಟ್ರಾನಿಕ್​ ಸಿಟಿ ನಗರದಾದ್ಯಂತ ಪ್ರಮುಖ ಕಚೇರಿ ಕ್ಯಾಂಪಸ್‌ಗಳಿಗೆ ಸಂಪರ್ಕಿಸುತ್ತದೆ. ಆ ಮೂಲಕ ಮೆಟ್ರೋ ನಿಲ್ದಾಣಗಳಿಂದ ಆಫೀಸ್​ಗಳಿಗೆ ಹೋಗುವವರಿಗೆ ಅನುಕೂಲವಾಗಲಿದೆ. ಈ ಸೇವೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿರಲಿದೆ. 

ನಮ್ಮ ಮೆಟ್ರೋ ಹಳದಿ ಮಾರ್ಗವು ಆರ್‌ವಿ ರಸ್ತೆ ಟು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಈ ಮಾರ್ಗದ ಮೆಟ್ರೋ ಸಂಚಾರ ಆರಂಭವಾದ ಕೆಲವೇ ದಿನಗಳಲ್ಲಿ ಈ ಉಚಿತ ಬಸ್​ ಸೇವೆ ನೀಡಲಾಗುತ್ತಿದೆ. ಆ ಮೂಲಕ ನಗರದ ದಕ್ಷಿಣ ಟೆಕ್ ಕಾರಿಡಾರ್‌ನಲ್ಲಿ ಸಾರ್ವಜನಿಕ ಸಾರಿಗೆ ಆಯ್ಕೆಗಳು ಗಮನಾರ್ಹವಾಗಿ ಹೆಚ್ಚಳವಾಗಿವೆ.

ಇನ್ನು ಅದೇ ರೀತಿಯಾಗಿ ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಇತ್ತೀಚೆಗೆ ಬಿಎಂಟಿಸಿ ಕೂಡ ತನ್ನ ಫೀಡರ್ ಬಸ್​ಗಳನ್ನು ರಸ್ತೆಗಿಳಿಸಿತ್ತು. ಆ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಅನುಕೂಲ ಮಾಡಿಕೊಟ್ಟಿತ್ತು. ಆಗಸ್ಟ್​ 11ರಿಂದ ಆರಂಭಗೊಂಡ ಬಿಎಂಟಿಸಿ ಫೀಡರ್ ಬಸ್ ಸೇವೆ, ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಮಾರ್ಗಗಳಲ್ಲಿ ಸಂಚಾರ ನಡೆಸಿವೆ.


Spread the love
Share:

administrator

Leave a Reply

Your email address will not be published. Required fields are marked *