Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನ ಬಕೆಟ್ ಮುಟ್ಟಿದ ಪುಟ್ಟ ಮಗು-ಕ್ರಿಕೆಟ್ ಬ್ಯಾಟ್, ವಿಕೆಟ್ ಬಳಸಿ ನಡೆಯಿತು ಹ*ಲ್ಲೆ

Spread the love

ಬೆಂಗಳೂರು : ಮಕ್ಕಳೆಂದರೆ ಆಟ ಆಡೋದು.. ಯಾವುದಾದರ ವಸ್ತುಗಳನ್ನು ಮುಟ್ಟೋದು, ಎಳೆಯೋದು ಕೆಡವೋದು ಸಾಮಾನ್ಯ.. ಆದರೆ ಪುಟ್ಟ ಮಗು ಗೊತ್ತಿಲ್ಲದೇ ನೀರಿನ ಬಕೆಟ್‌ ಮುಟ್ಟಿದ್ದಕ್ಕೆ ಮಗುವಿನ ಪೋಷಕರ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಲಭ್ಯವಾಗಿದೆ.

ಘಟನೆಯ ವಿವರ

ಆಂಧ್ರಹಳ್ಳಿ ಬಳಿಯ ವಿದ್ಯಾಮಾನ್ಯ ನಗರದಲ್ಲಿ ಗಂಗಾಧರ್‌ ಕುಟುಂಬ ವಾಸವಿತ್ತು. ಗಂಗಾಧರ್‌ ಪತ್ನಿ ಸೌಮ್ಯ ಮನೆಯಲ್ಲಿಯೇ ಟೈಲರ್‌ ಕೆಲಸ ಮಾಡಿಕೊಂಡಿದ್ದರು. ಸೌಮ್ಯ ಅವರ ಮಗು ಆಟವಾಡುತ್ತಾ ರಾಜೇಶ್ವರಿ ಅನ್ನೋರ ಮನೆಯ ಬಳಿ ಇದ್ದ ನೀರನ ಬಕೆಟ್‌ ಮುಟ್ಟಿದೆ. ಇದಿಷ್ಟಕ್ಕೆ ಜಗಳ ಆಡಿರುವ ರಾಜೇಶ್ವರಿ ಮಗ ಸೇರಿದಂತೆ ಇಬ್ಬರು ಗಂಗಾಧರ್‌ ಮತ್ತು ಸೌಮ್ಯಗೆ ಅವಾಚ್ಯ ಪದಗಳಿಂದ ನಿಂದಿಸಿ, ಕ್ರಿಕೆಟ್​ ಬ್ಯಾಟ್, ವಿಕೆಟ್​​​ ಬಳಸಿ ಮಗುವಿನ ತಂದೆ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ‘ಜೀವ ಬೆದರಿಕೆ ಹಾಕಿ, ಮನೆ ಕಿಟಕಿಯ ಗಾಜು ಒಡೆದು ಪುಂಡಾಟ ಮೆರೆದಿದ್ದಾರೆ.

ಆಗಸ್ಟ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *