Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿಯಲ್ಲಿ ಖತರ್ನಾಕ್ ಮಿರ್ಚಿ ಗ್ಯಾಂಗ್ ದಾಳಿ ವಿಡಿಯೋ ವೈರಲ್

Spread the love

ನವದೆಹಲಿ:ದೆಹಲಿಯಲ್ಲಿ (Delhi) ಖತರ್ನಾಕ್‌ ಮಿರ್ಚಿ ಗ್ಯಾಂಗ್‌ ಒಂದು ಜನತೆಯನ್ನು ಬೆಚ್ಚಿ ಬೀಳಿಸಿದೆ. ನಾಲ್ಕರಿಂದ ಐದು ದುಷ್ಕರ್ಮಿಗ ಗುಂಪೊಂದು ವೃದ್ಧ ಅಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ (Chili Powder) ಎರಚಿ ಅಂಗಡಿಯನ್ನು ದರೋಡೆ (Robbery) ಮಾಡಿರುವಂತಹ ಘಟನೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ (Jahangirpuri) ನಡೆದಿದೆ

ಈ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಸ್ಕೂಟರ್‌ಗಳಲ್ಲಿ ಬಂದ ನಾಲ್ಕರಿಂದ ಐದು ದರೋಡೆಕೋರರು ವೃದ್ಧ ಅಂಗಡಿ ಮಾಲೀಕನ ಮೇಲೆ ಹಠಾತ್ ದಾಳಿ ನಡೆಸಿ, ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಹಣದ ಡಬ್ಬಿಯನ್ನು ಎಗರಿಸಿಕೊಂಡು ಹೋಗಿದ್ದಾರೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಗಾಉತ್ತಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಖತರ್ನಾಕ್‌ ಮಿರ್ಚಿ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಕೈಗೆ ಇಬ್ಬರು ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಲಾಸಿಪಾಳ್ಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೆಸಿ‌ ರಸ್ತೆಯಲ್ಲಿ ಹರೀಶ್ ಕುಮಾರ್ (38) ಎಂಬಾತನ ಮೇಲೆ ಹಲ್ಲೆ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು ಒಂದು ವಾರದಲ್ಲೇ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಜೆ.ಸಿ ರಸ್ತೆಯಲ್ಲಿ ಆಗಸ್ಟ್ 2 ರಂದು ರಾತ್ರಿ 10:30 ಕ್ಕೆ ನಡೆದ ಹಲ್ಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಆಟೋಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹರೀಶ್ ರಾತ್ರಿ‌ ಹೊತ್ತು ಸ್ನೇಹಿತರ ಜೊತೆಗೆ ನಿಂತು ಮಾತನಾಡುತ್ತಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪ್ರಾಪ್ತರು ನೇರವಾಗಿ ಸಾಗುತ್ತಿದ್ದಿದ್ದನ್ನು ಕಂಡ ಹರೀಶ್‌ ಅವರಿಗೆ ಆ ಕಡೆ ಡೆಡ್ ಎಂಡ್ ಇದೆ ಎಂದು ಹೇಳಿದ್ದ.

ಇಷ್ಟಕ್ಕೇ ಕೋಪಗೊಂಡ ಆರೋಪಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಹರೀಶ್ ಕುಮಾರ್ ಕೈ ಗೆ ಗಂಭೀರವಾಗಿ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹರೀಶ್ ಹಲವು ದಿನಗಳ ಕಾಲ ಐಸಿಯುನಲ್ಲಿದ್ದ. ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *