Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿವಮೊಗ್ಗ-ಹರಿಹರ ರೈಲು ಯೋಜನೆ ಕೈಬಿಡಲು ಕೇಂದ್ರ ನಿರ್ಧಾರ – ರಾಜ್ಯ ಸರ್ಕಾರದ ಹಿನ್ನಡೆ

Spread the love

ನವದೆಹಲಿ: ಶಿವಮೊಗ್ಗ – ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಪ್ರಶ್ನೋತ್ತರ ಅವಧಿಯಲ್ಲಿ ಅವರು ಉತ್ತರಿಸಿದರು. ಈ ವೇಳೆ 79 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ 832 ಕೋಟಿ ರೂ. ವೆಚ್ಚ ತಗುಲಲಿದೆ. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಯೋಜನೆಗೆ ಅಗತ್ಯವಿರುವ 488 ಹೆಕ್ಟರ್ ಜಾಗವನ್ನು ರಾಜ್ಯ ಸರ್ಕಾರ ಉಚಿತವಾಗಿ ಸ್ವಾಧೀನ ಪಡಿಸಿ ಹಸ್ತಾಂತರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ರಾಜ್ಯ ಸರ್ಕಾರ ಒಪ್ಪಂದದಿಂದ ಹಿಂದೆ ಸರದಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆಯನ್ನು ಮಾಡುವುದಾಗಿ ಹಿಂದಿನ ಸರ್ಕಾರಗಳು ಭರವಸೆ ನೀಡಿದ್ದವು. ಈಗ ರಾಜ್ಯ ಸರ್ಕಾರದ ಈ ನಡೆ ಮತ್ತು ಹಿತಾಸಕ್ತಿ ಕೊರೆತೆಯಿಂದ ಈ ಯೋಜನೆ ಕನಸಾಗೇ ಉಳಿದಿದೆ.


Spread the love
Share:

administrator

Leave a Reply

Your email address will not be published. Required fields are marked *