Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಸರಗೋಡು ಯೂಟ್ಯೂಬರ್‌ನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ!

Spread the love

ಕಾಸರಗೋಡು: ಅಪ್ರಾಪ್ತ ಬಾಲಕಿಯನ್ನು ವಿವಾಹ ವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಾಸರಗೋಡಿನ ಯೂಟ್ಯೂಬರ್ ನೋರ್ವನನ್ನು ಕೋಝಿಕ್ಕೋಡ್ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ.

ಕೊಡಿಯಮ್ಮೆ ಚೆಪ್ಪಿನಡ್ಕದ ಸಾಲು ಕಿಂಗ್ ಅಲಿಯಾಸ್ ಮೊಹಮ್ಮದ್ ಸಾಲಿ(35) ಬಂಧಿತ ಆರೋಪಿ. ಆರೋಪಿಯು ವಿದೇಶದಿಂದ ಹಿಂದಿರುಗುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಪೊಲೀಸರು ಬಂಧಿಸಿದ್ದಾರೆ.ಸುಮಾರು ಏಳು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಲು ಕಿಂಗ್ ಮೀಡಿಯ, ಸಾಲು ಕಿಂಗ್ ವ್ಲಾಗ್ಸ್, ಸಾಲು ಕಿಂಗ್ ಫ್ಯಾಮಿಲಿ ಮೊದಲಾದ ಹೆಸರಿನಲ್ಲಿ ಸಕ್ರಿಯನಾಗಿದ್ದನು. ಇನ್ನು 2016 ರಲ್ಲಿ ಈತ ವಿವಾಹವಾಗಿದ್ದು, ಮೂವರು ಮಕ್ಕಳು ಕೂಡ ಇದ್ದಾರೆ.

ಈ ನಡುವೆ ಪತ್ನಿಯೊಂದಿಗೆ ವಿರಸ ಉಂಟಾಗಿದ್ದು, ಹದಿನೈದರ ಬಾಲಕಿ ಜೊತೆ ಈತ ಸಂಬಂಧ ಬೆಳೆಸಿದ್ದನು. ಬಾಲಕಿಯು ಇನ್‌ಸ್ಟಾಗ್ರಾಂ, ಸ್ನ್ಯಾಪ್ ಚಾಟ್ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಬಳಿಕ ವಿವಾಹವಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ.ಇನ್ನು ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿಯು ವಿದೇಶಕ್ಕೆ ಪಲಾಯನ ಗೈದಿದ್ದನು. ಈತನ ಬಂಧನಕ್ಕೆ ಕೊಯಿಲಾಂಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ವಿದೇಶದಿಂದ ಶನಿವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಕೊಯಿಲಾಂಡಿ ಪೊಲೀಸರು ಈತನನ್ನು ಬಂಧಿಸಿದರು.


Spread the love
Share:

administrator

Leave a Reply

Your email address will not be published. Required fields are marked *