Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವರ್ಷದಲ್ಲಿ 981 ರೈತರ ಆತ್ಮಹತ್ಯೆ-ಯಾವ ಸರ್ಕಾರಕ್ಕೂ ಅನ್ನದಾತರ ಕಾಪಾಡಲಾಗಲಿಲ್ಲವೇ?

Spread the love

ಬೆಂಗಳೂರು:ಉಚಿತ ವಿದ್ಯುತ್‌, ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ, ಕೃಷಿ, ತೋಟಗಾರಿಕೆ, ರೈಷೆ ಹಾಗೂ ಪಶುಪಾಲನೆ ಇಲಾಖೆಗಳ ಮೂಲಕ ಸಹಾಯಧನ, ರಿಯಾಯ್ತಿ ನೀಡುವ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ರಾಜ್ಯದಲ್ಲಿ ರೈತರ ಆತಹತ್ಯೆ ಪ್ರಕರಣಗಳು ನಿಂತಿಲ್ಲ.

ಅಲ್ಲದೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ನೆರವಿಗೆ ಧಾವಿಸಿದೆ. ಆದರೂ ಕಳೆದೊಂದು ವರ್ಷದ ಅವಧಿಯಲ್ಲೇ ರಾಜ್ಯದಲ್ಲಿ 981 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಬಾಧೆ, ಬೆಳೆನಷ್ಟ ಮೊದಲಾದ ಕಾರಣಗಳಿಗೆ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ.

ಲಭ್ಯವಿರುವ ಮಾಹಿತಿ ಪ್ರಕಾರ 2024ರ ಏಪ್ರಿಲ್‌ ಒಂದರಿಂದ ಮೇ 25ರವರೆಗೆ ರಾಜ್ಯದಲ್ಲಿ 981ರೈತರ ಆತಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸರ್ಕಾರದಿಂದ 807 ಪ್ರಕರಣಗಳಲ್ಲಿ ಮೃತ ರೈತರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ.

138 ರೈತರ ಆತಹತ್ಯೆ ಪ್ರಕರಣಗಳನ್ನು ತಿರಸ್ಕರಿಸಿದ್ದು, ಬೇರೆ ಕಾರಣಗಳಿಗೆ ಆತಹತ್ಯೆಮಾಡಿಕೊಂಡ ಪ್ರಕರಣಗಳೆಂದು ಪರಿಗಣಿಸಲಾಗಿದೆ. 825 ಪ್ರಕರಣಗಳನ್ನು ಅರ್ಹವೆಂದು ಪರಿಗಣಿಸಲಾಗಿದೆ. ಇನ್ನೂ 18 ಪ್ರಕರಣಗಳಲ್ಲಿ ಸರ್ಕಾರದಿಂದ ಪರಿಹಾರ ನೀಡಬೇಕಿದೆ.

ಈ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತಹತ್ಯೆ ಮಾಡಿಕೊಂಡಿರುವುದು ಹಾವೇರಿ ಜಿಲ್ಲೆಯಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೈತರು ಆತಹತ್ಯೆ ಮಾಡಿಕೊಂಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಬ್ಬ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. 21 ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಹಾಗೂ ಆರು ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ.

ಹಾವೇರಿ -128, ಕಲಬುರಗಿ- 82, ಮೈಸೂರು-73, ಧಾರವಾಡ-72, ಬೆಳಗಾವಿ-71, ಹಾಸನ- 47, ಬೀದರ್‌-45, ಶಿವಮೊಗ್ಗ-45, ಗದಗ-44, ಯಾದಗಿರಿ-43, ದಾವಣಗೆರೆ-42, ಚಿಕ್ಕಮಗಳೂರು-39, ಮಂಡ್ಯ-39, ಬಾಗಲಕೋಟೆ-35, ಚಿತ್ರದುರ್ಗ-34, ರಾಯಚೂರು-26, ಕೊಪ್ಪಳ-25, ವಿಜಯಪುರ-23, ವಿಜಯನಗರ, ತುಮಕೂರು-17, ಉತ್ತರ ಕನ್ನಡ-14 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *