ಪ್ರಿಯಕರನೊಂದಿಗೆ ಬದುಕಲು ಪಾರ್ಶ್ವವಾಯು ಪೀಡಿತ ಪತಿಯ ಕೊಲೆ: ನಾಗ್ಪುರದಲ್ಲಿ ಪತ್ನಿ, ಪ್ರಿಯಕರ ಬಂಧನ!

ಮಹಾರಾಷ್ಟ್ರ: ದೇಶದದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣ ಮತ್ತು ವಿವಾಹೇತರ ಸಂಬಂಧಗಳಿಂದಾಗಿ ಗಂಡಂದಿರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಪ್ರಿಯಕರ ಜತೆ ವಾಸಿಸಲು ತನ್ನ ಅನಾರೋಗ್ಯ ಪೀಡಿತ ಗಂಡನನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ
30ರ ದಿಶಾ ರಾಮ್ಟೆಕ್ ಎಂಬ ಮಹಿಳೆ ಪತಿ ಚಂದ್ರಸೇನ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ದಿಶಾ ಮತ್ತು ಪ್ರಿಯಕರ ಆಸೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದ ಘಟನೆ ಏನು..?
ಕೆಲ ವರ್ಷಗಳಿಂದ ದಿಶಾ, ಆಸಿಫ್ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿ ಸಂಬಂಧ ಬೆಳಸಿಕೊಂಡಿದ್ದಾಳೆ. ಈ ವಿಚಾರ ಸಲ್ಪ ದಿನಗಳ ಬಳಿಕ ದಿಶಾ ಗಂಡ ಚಂದ್ರಸೇನ್ಗೆ ತಿಳಿದೆ. ಅಂದಿನಿಂದ ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಆದರೆ, ಕೆಲ ತಿಂಗಳುಗಳ ಹಿಂದೆ ಚಂದ್ರಸೇನ್ ಪಾರ್ಶ್ವವಾಯು ರೋಗಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾನೆ. ಇದನ್ನೇ ಅವಕಾಶ ಮಾಡಿಕೊಂಡ ದಿಶಾ, ಪ್ರಿಯಕರ ಆಸಿಫ್ ಜತೆಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
ಇನ್ನು ಈ ಇಬ್ಬರು ವಾಸಿಸಲು ಗಂಡ ಅಡ್ಡಿಯಾಗಿದ್ದಾನೆ ಎಂದು ಪ್ರಿಯಕರ ಜೊತೆಗೂಡಿ ಪ್ಲ್ಯಾನ್ ಮಾಡಿ ಕತ್ತು ಹಿಸುಕಿ ಕೊಂದಿದ್ದಾಳೆ. ಪೊಲೀಸರ ಬಳಿಕ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಆದರೆ, ಮರಣೋತ್ತರ ವರದಿಯಲ್ಲಿ ಕತ್ತು ಹಿಸುಕಿ ಕೊಂದಿರುವ ಬಗ್ಗೆ ಮಾಹಿತಿ ಬಂದಿದೆ. ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ.
