Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆನ್‌ಲೈನ್‌ನಲ್ಲಿ ಮೀನಿನ ಬಲೆ ಖರೀದಿಸಲು ಹೋಗಿ ₹41,250 ಕಳೆದುಕೊಂಡ ಮಹಿಳೆ!

Spread the love

ಮಲ್ಪೆ: ಆನ್‌ಲೈನ್‌ ಮೂಲಕ ಮೀನಿನ ಬಲೆ ಖರೀದಿಸಲು ಹೊರಟ ಮೀನುಗಾರ ಮಹಿಳೆಯೊಬ್ಬರು ವಂಚಕರ ಬಲೆಗೆ ಬಿದ್ದಿರುವುದಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಕೋಡಿಬೆಂಗ್ರೆಯ ರೇಷ್ಮಾ ಅವರು ಇನ್‌ಸ್ಟಾಗ್ರಾಮ್‌ ಲಿಂಕ್‌ ಮೂಲಕ ಮೀನಿನ ಬಲೆ ಬುಕ್‌ ಮಾಡಿ ಕಾಯುತ್ತಿದ್ದರು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ರೇಷ್ಮಾ ಅವರಿಗೆ ಕರೆ ಮಾಡಿ ಬಲೆಯನ್ನು ಡೆಲಿವರಿ ಕೊಡಲು ಹಣ ಪಾವತಿ ಮಾಡುವಂತೆ ತಿಳಿಸಿ ತನ್ನ ಮೊಬೈಲ್‌ ನಂಬರನ್ನು ನೀಡಿದ್ದನು.

ರೇಷ್ಮಾ ಅವರು ಅ ನಂಬರಿಗೆ ಹಂತ ಹಂತವಾಗಿ 4,350 ರೂ., 15,400 ರೂ., ಮತ್ತು 8,000 ರೂ.ಗಳನ್ನು ಗೂಗಲ್‌ ಪೇ ಮೂಲಕ ಜಮೆ ಮಾಡಿದ್ದರು. ಬಳಿಕ ಆತ ಇನ್ನೊಂದು ಮೊಬೈಲ್‌ ನಂಬರ್‌ ನೀಡಿ ಉಳಿದ ಹಣವನ್ನು ಅದಕ್ಕೆ ಕಳುಹಿಸುವಂತೆ ತಿಳಿಸಿದ್ದು. ರೇಷ್ಮಾ ಅವರು ಮತ್ತೆ 13,500 ರೂ. ಪಾವತಿ ಮಾಡಿದ್ದರು. ಆದರೆ ಆ ವ್ಯಕ್ತಿ ಇದುವರೆಗೂ ಮೀನಿನ ಬಲೆಯನ್ನು ಕಳುಹಿಸಿದೇ, ಹಣವನ್ನು ಮರಳಿಸದೆ ವಂಚನೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *