ಯುಟ್ಯೂಬ್ ವಿಡಿಯೋ ಕಾಮೆಂಟ್ ವಿವಾದ: ಗಂಡನಿಂದ ಹ*ಲ್ಲೆ

ಕಾಸರಗೋಡು:ಮಹಿಳೆಯೊಬ್ಬರು ಗಂಡನ ವಿರುದ್ಧ ದೂರು ಸಲ್ಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ನೀಲೇಶ್ವರಂನ ಸುಜಿತಾ ಎಂಬುವರು ಗಂಡ ರಘು ವಿರುದ್ಧ ಹಲ್ಲೆ ದೂರು ದಾಖಲಿಸಿದ್ದಾರೆ. ಸುಜಿತಾ ಯುಟ್ಯೂಬ್ ಚಾನೆಲ್ ಹೊಂದಿದ್ದು, ಇವರ ವಿಡಿಯೋಗಳಿಗೆ ಗಂಡ ರಘು ಅಸಭ್ಯವಾಗಿ ಕಮೆಂಟ್ ಮಾಡುತ್ತಿದ್ದನು.

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ರಘು ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸುಜಿತಾ ಆರೋಪಿಸಿದ್ದಾರೆ. ಗಂಡ ರಘು ತನ್ನ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳನ್ನು ಸಾಕ್ಷ್ಯವಾಗಿ ನೀಡಿದ್ದಾರೆ. ವಿಡಿಯೋ ಸಹಿತ ಗಂಡ ರಘು ವಿರುದ್ಧ ಸುಜಿತಾ ದೂರು ದಾಖಲಿಸಿದ್ದಾರೆ.
40 ವರ್ಷದ ನೀಲೇಶ್ವರಂನ ನಿವಾಸಿಯಾಗಿರುವ ಸುಜಿತಾ, ಕ್ಲಿನಿಕ್ ಮತ್ತು ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಗಂಡ ರಘು ಕುವೈತ್ನಲ್ಲಿ ಕೆಲಸ ಮಾಡಿಕೊಂಡಿದ್ದರೂ, ಪತ್ನಿಗೆ ಹಣ ಕಳುಹಿಸುತ್ತಿರಲಿಲ್ಲ. ಹಾಗಾಗಿತೇ ಸುಜಿತಾ ಕೆಲಸ ಮಾಡಿಕೊಂಡಿದ್ದರು. ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿರೋದರಿಂದ ಸುಜಿತಾ, ಯುಟ್ಯೂಬ್ ಚಾನೆಲೆ ಆರಂಭಿಸಿ ಸ್ವಲ್ಪ ಹಣ ಗಳಿಸಲು ಶುರು ಮಾಡಿದ್ದರು.

ಕೂದಲು ಹಿಡಿದು ಎಳೆದಾಡಿ ಹಲ್ಲೆ
ಪತ್ನಿ ಸುಜಿತಾ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳಿಗೆ ರಘು ಅಸಭ್ಯವಾಗಿ ಕಮೆಂಟ್ ಮಾಡಲು ಆರಂಭಿಸಿದ್ದನು. ಈ ರೀತಿ ಕಮೆಂಟ್ ಹಾಕುತ್ತಿರೋದನ್ನು ಸುಜಿತಾ ಪ್ರಶ್ನೆ ಮಾಡಿದ್ದರು. ದಿಕ್ಕೆ ಕೋಪಗೊಂಡು, ಸುಜಿತಾ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾನೆ. ಈ ಹಿಂದೆಯೂ ಹಲವು ಬಾರಿ ಗಂಡ ಹಲ್ಲೆ ನಡೆಸಿದ್ದಾಗಿ ಸುಜಿತಾ ಹೇಳಿಕೊಂಡಿದ್ದಾರೆ. 2023ರಲ್ಲಿ ಗಂಡನ ವಿರುದ್ಧ ಸುಜಿತಾ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಇದೀಗ ಮತ್ತೆ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ.
