ಜ್ವಾಲಾಮುಖಿ ಕಂದರಕ್ಕೆ ಬಿದ್ದು ಬ್ರೆಜಿಲಿಯನ್ ಪಾದಯಾತ್ರಿ ಸಾವು! ತಾಯಿಗೆ ಕಳುಹಿಸಿದ ಸಂದೇಶ ವೈರಲ್

ಇಂಡೋನೇಷ್ಯಾ: ತಾಯಿಗೆ ಸಂದೇಶ ಕಳುಹಿಸಿದ ಬಳಿಕ ಪಾದಯಾತ್ರಿಯೊಬ್ಬರು (Brazilian Hiker) ಜ್ವಾಲಾಮುಖಿಯ ಕಂದರಕ್ಕೆ (Indonesian Volcano) ಬಿದ್ದು ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ (Indonesia) ನಡೆದಿದೆ. ಬ್ರೆಜಿಲಿಯನ್ ಪಾದಯಾತ್ರಿ ಜೂಲಿಯಾನಾ ಮರಿನ್ಸ್ (Juliana Marins) ಜೂನ್ 21 ರಂದು ಇಂಡೋನೇಷ್ಯಾದ ಎರಡನೇ ಅತಿ ಎತ್ತರದ ಜ್ವಾಲಾಮುಖಿ ಪ್ರದೇಶವಾದ ಮೌಂಟ್ ರಿಂಜಾನಿಯಲ್ಲಿ (Mount Rinjani) ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಗುಂಪಿನೊಂದಿಗೆ ಪಾದಯಾತ್ರೆ ನಡೆಸುತ್ತಿದ್ದ ಅವರು ಜಾರಿ ಬಿದ್ದು ಜ್ವಾಲಾಮುಖಿಯ ಕಂದರಕ್ಕೆ ಬಿದ್ದರು. ಅವರು ತಮ್ಮ ಪಾದಯಾತ್ರೆಯ ಆರಂಭದಲ್ಲಿ ತಾಯಿಗೆ ಪ್ರೀತಿಪೂರ್ವಕ ಸಂದೇಶವನ್ನು ಕಳುಹಿಸಿದ್ದರು ಎನ್ನಲಾಗಿದೆ.
ಇಂಡೋನೇಷ್ಯಾದಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಯ ಮೇಲೆ ಚಾರಣ ಮಾಡುತ್ತಿದ್ದಾಗ ಬಂಡೆಯಿಂದ ಕಾಲು ಜಾರಿ ಜ್ವಾಲಾಮುಖಿಗೆ ಬಿದ್ದ ಬ್ರೆಜಿಲಿಯನ್ ಪಾದಯಾತ್ರಿ ಜೂಲಿಯಾನಾ ಮರಿನ್ಸ್ ಸಾವನ್ನಪ್ಪಿದ್ದಾರೆ. ಅವರು ತಮ್ಮ ಪ್ರವಾಸದ ಆರಂಭದಲ್ಲಿ ತಾಯಿಗೆ ಪ್ರೀತಿಯ ಸಂದೇಶವನ್ನು ಕಳುಹಿಸಿದ್ದರು.
ಜೂನ್ 21ರಂದು ಈ ಘಟನೆ ಇಂಡೋನೇಷ್ಯಾದ ಎರಡನೇ ಅತಿ ಎತ್ತರದ ಜ್ವಾಲಾಮುಖಿಯಾದ ಮೌಂಟ್ ರಿಂಜಾನಿಯಲ್ಲಿ ನಡೆದಿದೆ. ನಾಲ್ಕು ದಿನಗಳ ಬಳಿಕ ಆಕೆಯ ಮೃತದೇಹವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬ್ರೆಜಿಲ್ನ ಪ್ರಚಾರಕಿ ಮತ್ತು ಪೋಲ್ ಡ್ಯಾನ್ಸರ್ ಆಗಿದ್ದ ಮರಿನ್ಸ್ ಫೆಬ್ರವರಿಯಿಂದ ಏಷ್ಯಾದಾದ್ಯಂತ ಪ್ರಯಾಣ ನಡೆಸುತ್ತಿದ್ದರು.ಈ ಮೊದಲು ಫಿಲಿಪೈನ್ಸ್ಗೆ ಪ್ರವಾಸ ಮಾಡಿದ್ದಾಗ ಅವರು ತಮ್ಮ ತಾಯಿಗೆ ಸಂದೇಶ ಕಳುಹಿಸಿದ್ದು, ಇದರಲ್ಲಿ ಅವರು, ಅಮ್ಮ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾವು ವಿದಾಯ ಹೇಳಿದಾಗ ನನಗೆ ಹೃದಯ ವಿದ್ರಾವಕವಾಯಿತು. ವಾಸ್ತವವಾಗಿ ನನಗೆ ಚಿಂತೆ ಮಾಡುವ ಏಕೈಕ ವ್ಯಕ್ತಿ ನೀನು. ಅದನ್ನು ಹೊರತುಪಡಿಸಿ ನಾನು ಹೆಚ್ಚು, ಕಡಿಮೆ ತೊಂದರೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದರು.
26 ವರ್ಷದ ಬ್ರೆಜಿಲಿಯನ್ ಪಾದಯಾತ್ರಿ ಜೂಲಿಯಾನಾ ಮರಿನ್ಸ್ ಬಂಡೆಯ ಮೇಲಿಂದ ಸುಮಾರು 490 ಅಡಿಗಳಷ್ಟು ಕೆಳಗೆ ಜಾರಿ ಬಿದ್ದಿದ್ದಾರೆ. ಇದು ಬೆಳಗ್ಗೆ 6.30 ರ ಸುಮಾರಿಗೆ ನಡೆದಿದೆ. ಅವರು ಸಹಾಯಕ್ಕಾಗಿ ಕಿರುಚಾಡುವುದು ಕೇಳಿತ್ತು. ಅಲ್ಲದೇ ಬಳಿಕ ಡ್ರೋನ್ ದೃಶ್ಯಾವಳಿಗಳಲ್ಲಿ ಅವರು ಇನ್ನೂ ಜೀವಂತವಾಗಿರುವುದು ತಿಳಿದಿತ್ತು. ಆದರೆ ಜ್ವಾಲಾಮುಖಿಯನ್ನು ಆವರಿಸಿರುವ ದಟ್ಟವಾದ ಮಂಜು ಮತ್ತು ಇತರ ಪ್ರತಿಕೂಲ ಪರಿಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಕರ್ತರು ಸರಿಯಾದ ಸಮಯಕ್ಕೆ ಅವರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳಿದ್ದಾರೆ.
ಮರಿನ್ಸ್ ಮೃದುವಾದ ಭೂಮಿಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹಗ್ಗಗಳಿಂದ ಎಳೆಯುವುದು ಸವಾಲಿನ ಕೆಲಸವಾಗಿತ್ತು. ನಾಲ್ಕು ದಿನಗಳ ಶ್ರಮದ ಬಳಿಕ ರಕ್ಷಣಾ ತಂಡಗಳು ಬ್ರೆಜಿಲಿಯನ್ ಪ್ರವಾಸಿಯ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆದರು ಎಂದು ಬ್ರೆಜಿಲ್ ಸರ್ಕಾರ ತಿಳಿಸಿದೆ.
ಆಗ್ನೇಯ ಏಷ್ಯಾದ ದ್ವೀಪಸಮೂಹದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಇಂಡೋನೇಷ್ಯಾದ ಲೊಂಬೊಕ್ ದ್ವೀಪದಲ್ಲಿ ಜ್ವಾಲಾಮುಖಿ 12,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ಕಳೆದ ತಿಂಗಳು ಇಲ್ಲಿ ಮಲೇಷ್ಯಾದ ಪ್ರವಾಸಿಗರೊಬ್ಬರು ಪ್ರಾಣ ಕಳೆದುಕೊಂಡಿದ್ದರು.
